ಸೈನಾ ನೆಹ್ವಾಲ್ 
ದೇಶ

ಯೋಗಿಯನ್ನು ಅಭಿನಂದಿಸಿದ ಸೈನಾ ನೆಹ್ವಾಲ್; 'ಸರ್ಕಾರಿ ಶಟ್ಲರ್' ಎಂದ ಆರ್ ಜೆಡಿ ಮುಖ್ಯಸ್ಥ ಟೀಕೆ

ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ  ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಸರ್ಕಾರಿ ಶಟ್ಲರ್ ಎಂದು ಆರ್ ಜೆಡಿ ಅಧ್ಯಕ್ಷ ಜಯಂತ್ ಚೌದರಿ ಕರೆದಿದ್ದಾರೆ.

ಲಖನೌ: ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ  ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಸರ್ಕಾರಿ ಶಟ್ಲರ್ ಎಂದು ಆರ್ ಜೆಡಿ ಅಧ್ಯಕ್ಷ ಜಯಂತ್ ಚೌದರಿ ಕರೆದಿದ್ದಾರೆ.

ಶನಿವಾರ ರಾತ್ರಿ ಟ್ವಿಟ್ ಮಾಡಿದ್ದ ಸೈನಾ ನೆಹ್ವಾಲ್, ಉತ್ತರ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಯೋಗಿ ಆದಿತ್ಯನಾಥ್ ಸರ್ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುವುದಾಗಿ ಬರೆದುಕೊಂಡಿದ್ದರು.

ಸೈನಾ ನೆಹ್ವಾಲ್ ಮಾಡಿದ ಒಂದೂವರೆ ಗಂಟೆಗಳ ನಂತರ ಟ್ವಿಟ್ ಮಾಡಿದ್ದ ರಾಷ್ಟ್ರೀಯ ಲೋಕ ದಳ ಅಧ್ಯಕ್ಷ ಚೌದರಿ, ಜನರ ತೀರ್ಪನ್ನು ವಿಭಜಿಸುವ ಬಿಜೆಪಿ ಕೌಶಲ್ಯವನ್ನು ಸರ್ಕಾರಿ ಶಟ್ಲರ್ ಗುರುತಿಸಿದ್ದಾರೆ ಎಂದಿದ್ದರು.

ಆಡಳಿತಾರೂಢ ಪಕ್ಷ ಮತಗಳನ್ನು ಕದಿದ್ದು, ಪೊಲೀಸರನ್ನು ಬಳಸಿ ಮತದಾನವನ್ನು ನಿಲ್ಲಿಸಿದೆ ಎಂದು ಎಸ್ ಪಿ ಆರೋಪದ ನಡುವೆಯೂ ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಬಿಜೆಪಿ ಶನಿವಾರ ಹೇಳಿಕೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Amritsar: ಉಗ್ರರ ದಾಳಿ ಸಂಚು ವಿಫಲ; ISI ಜೊತೆಗೆ ನಂಟು ಹೊಂದಿದ್ದ ಇಬ್ಬರ ಬಂಧನ; ರಾಕೆಟ್ ಚಾಲಿತ ಗ್ರೆನೇಡ್ ವಶಕ್ಕೆ!

ವ್ಲಾಡಿಮಿರ್ ಕ್ರಾಮ್ನಿಕ್ ವಂಚನೆ ಆರೋಪ: ಗ್ರ್ಯಾಂಡ್ ಮಾಸ್ಟರ್ ಡೇನಿಯಲ್ ನರೋಡಿಟ್ಸ್ಕಿ ಆತ್ಮಹತ್ಯೆ; ನಿಹಾಲ್ ಸರಿನ್ ಆಕ್ರೋಶ!

ಮಾನ್ಯ ವೀಸಾ ಹೊಂದಿದ್ದರೂ ಹಿಂದಿ ವಿದ್ವಾಂಸೆ ಫ್ರಾನ್ಸೆಸ್ಕಾ ಓರ್ಸಿನಿಗೆ ಭಾರತ ಪ್ರವೇಶಕ್ಕೆ ನಿರಾಕರಣೆ!

ಸೊಸೆ ಜೊತೆ ತಂದೆ ಅಕ್ರಮ ಸಂಬಂಧ: ಮಗನ ಕೊಲೆ ಆರೋಪ; ತಂದೆ ಮಾಜಿ DGP ಮುಸ್ತಫಾ, ತಾಯಿ, ಪತ್ನಿ ವಿರುದ್ಧ FIR!

India 'Proxy war': ಪಾಕಿಸ್ತಾನದ ಆರೋಪಕ್ಕೆ ಅಪ್ಘಾನಿಸ್ತಾನ ತಿರುಗೇಟು! ಹೇಳಿದ್ದೇನು? Video

SCROLL FOR NEXT