ದೇಶ

ಸ್ಟಾನ್ ಸ್ವಾಮಿ ಬಗ್ಗೆ ನಿರ್ಲಕ್ಷ್ಯಕ್ಕೆ ಕೇಂದ್ರವೇ ಹೊಣೆ ಹೊರಬೇಕು: ಜಾರ್ಖಂಡ್ ಸಿಎಂ ಹೇಮಂತ್ ಸೂರೆನ್

Nagaraja AB

ರಾಂಚಿ: ಫಾದರ್ ಸ್ಟಾನ್ ಸ್ವಾಮಿ ಅವರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದ ಕೇಂದ್ರ ಸರ್ಕಾರವೇ ಅವರ ಸಾವಿಗೆ ಹೊಣೆ ಹೊರಬೇಕೆಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೆನ್ ಆರೋಪಿಸಿದ್ದಾರೆ.
 
ಫಾದರ್ ಸ್ಟಾನ್ ಸ್ವಾಮಿ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಬುಡುಕಟ್ಟು ಜನರ ಹಕ್ಕುಗಳಿಗಾಗಿ ಅವರ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರ ಬಂಧನವನ್ನು ತೀವ್ರವಾಗಿ ವಿರೋಧಿಸುತ್ತೇನೆ. ನಿರ್ಲಕ್ಷ್ಯ ಮತ್ತು ಸೂಕ್ತ ವೈದ್ಯಕೀಯ ಸೇವೆ ಪೂರೈಸದಿದ್ದರಿಂದ ಅವರು ಮೃತಪಟ್ಟಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಹೇಮಂತ್ ಸೂರೆನ್ ಟ್ವಿಟ್ ಮಾಡಿದ್ದಾರೆ.

ಸ್ಟಾನ್ ಸ್ವಾಮಿ ಜಾರ್ಖಂಡ್ ನಲ್ಲಿ ಮೂರು ದಶಕಗಳ ಕಾಲ ಬುಡಕಟ್ಟು ಜನರಿಗಾಗೆ ಕೆಲಸ ಮಾಡಿದ್ದರು. ಸ್ವಾಮಿ ಸಾವಿನ ಬಗ್ಗೆ  ರಾಂಚಿ ಕ್ಯಾಥೊಲಿಕ್ ಆರ್ಚ್ಡಯಸೀಸ್ ಸಂತಾಪ ವ್ಯಕ್ತಪಡಿಸಿದೆ.

SCROLL FOR NEXT