ಸಂಗ್ರಹ ಚಿತ್ರ 
ದೇಶ

ಹಣ ನೀಡಲು ನಿರಾಕರಿಸಿದ ಪೋಷಕರು: ಲಿಂಗಪರಿವರ್ತಿತ ವ್ಯಕ್ತಿ ಸೇರಿ ಇಬ್ಬರಿಂದ ಹೆಣ್ಣು ಮಗುವಿನ ಕೊಲೆ!

ಮೂರು ತಿಂಗಳ ಹೆಣ್ಣು ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿ ಕಾಲುವೆಗೆ ಎಸೆದು ಕೊಂದಿರುವ  ಘಟನೆ ಮುಂಬೈನಲ್ಲಿ ನಡೆದಿದ್ದು ಅವರಲ್ಲಿ ಓರ್ವ ಲಿಂಗಪರಿವರ್ತಿತ ವ್ಯಕ್ತಿ ಎನ್ನಲಾಗಿದೆ. 

ಮುಂಬೈ: ಮೂರು ತಿಂಗಳ ಹೆಣ್ಣು ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿ ಕಾಲುವೆಗೆ ಎಸೆದು ಕೊಂದಿರುವ  ಘಟನೆ ಮುಂಬೈನಲ್ಲಿ ನಡೆದಿದ್ದು ಅವರಲ್ಲಿ ಓರ್ವ ಲಿಂಗಪರಿವರ್ತಿತ ವ್ಯಕ್ತಿ ಎನ್ನಲಾಗಿದೆ. 

ಮಗುವಿನ ಪೋಷಕರು ಸ್ವಲ್ಪ ಹಣ, ತೆಂಗಿನಕಾಯಿ ಮತ್ತು ಸೀರೆ ನೀಡಬೇಕೆಂಬ ತಮ್ಮ ಬೇಡಿಕೆ ಈಡೇರಿಸದ ಕಾರಣ ಆರೋಪಿಗಳು ಮಗುವನ್ನು ಎಸೆದಿರುವುದಾಗಿ  ದಕ್ಷಿಣ ಮುಂಬೈ, ಪೊಲೀಸರು ಹೇಳಿದ್ದಾರೆ.

ಗುರುವಾರ ಸಂಜೆ ನಾಪತ್ತೆಯಾಗಿದ್ದ ಮಗುವಿನ ಶವವನ್ನು ಕಾಲುವೆಯಲ್ಲಿ ಗುರುತಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ,ಯೊಬ್ಬ ಲಿಂಗಪರಿವರ್ತಿತನಾಗಿದ್ದು ಮಗುವನ್ನು ಮನೆಗೆ ಹಿಂದಿರುಗಿಸಲು ಭೇಟಿ ನೀಡಿದ್ದಾಳೆ. ಆ ವೇಳೆ ಪೋಷಕರಿಂದ ಸ್ವಲ್ಪ ನಗದು, ತೆಂಗಿನಕಾಯಿ ಮತ್ತು ಸೀರೆಯನ್ನು ಉಡುಗೊರೆಯಾಗಿ ಕೋರಿದ್ದಾಳೆ. ಆದರೆ ಮಗುವಿನ ಪೋಷಕರಿ ಇದನ್ನು ನೀಡಲು ಒಪ್ಪಿರಲಿಲ್ಲ. ತೀವ್ರ ವಾಗ್ವಾದದ ಬಳಿಕ  , ಆರೋಪಿ ಗುರುವಾರ ಸಂಜೆ ಮಗುವನ್ನು ಅಪಹರಿಸಿ ಕಾಲುವೆಗೆ ಎಸೆದಿದ್ದಾಳೆ. ಮಗುವಿನ ಕುಟುಂಬವು ಮಗುವಿಗಾಗಿ ಹುಡುಕಿ ಬಳಿಕ ಪೊಲೀಸರಿಗೆ ದೂರು ನೀಡಿದೆ.

ಆರಂಭದಲ್ಲಿ, ಅಪಹರಣದ ಪ್ರಕರಣ ದಾಖಲಾಗಿದ್ದರೂ, ಮಗುವಿನ ಶವವನ್ನು ವಶಕ್ಕೆ ಪಡೆದ ನಂತರ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ಬೇಟೆಯಾಡಿ ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ: ಮುಂದಿನ ತಿಂಗಳು ಭಾರತಕ್ಕೆ ಬರಲಿದೆ S-400 ಕ್ಷಿಪಣಿ 4ನೇ ಘಟಕ!

ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ: ಹಣಕ್ಕಾಗಿ ಹೂತಿಟ್ಟ ಸಹೋದರಿ ಶವವನ್ನೇ ಬ್ಯಾಂಕ್​ಗೆ ಹೊತ್ತು ತಂದ ವ್ಯಕ್ತಿ!

Iran War: ಜಗತ್ತಿಗೆ ಶಾಕ್ ಕೊಟ್ಟ UAE, ತೈಲ ರಫ್ತು ಗುಂಪುಗಳಿಂದ ಏಕಾಏಕಿ ಹೊರಕ್ಕೆ! ಆಗಿದ್ದೇನು?

ಬೆಂಗಳೂರಿಗೆ ಕೊನೆಗೂ ತಂಪರೆದ ಮಳೆರಾಯ, ಮೇ 2ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಮೇ 15ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗೋದು ಗ್ಯಾರಂಟಿ: ಹೊಸ ಡೇಟ್ ಕೊಟ್ಟ ಶಾಸಕ ಇಕ್ಬಾಲ್ ಹುಸೇನ್!

SCROLL FOR NEXT