ದೇಶ

ಪ್ರವಾಸಿ ತಾಣಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದೆ ಜನರ ಸೇರುವಿಕೆ 'ಕಳವಳಕ್ಕೆ ಗಂಭೀರ ಕಾರಣವಾಗಿದೆ': ಸರ್ಕಾರ

Vishwanath S

ನವದೆಹಲಿ: ಕೋವಿಡ್ ಮಾರ್ಗಸೂಚಿ ಪಾಲಿಸದೆ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವ ದೃಶ್ಯಗಳು 'ಕಳವಳಕ್ಕೆ ಗಂಭೀರ ಕಾರಣ' ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾರುಕಟ್ಟೆಗಳು ಮತ್ತು ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಇದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ಸಾಮಾಜಿಕ ದೂರ ಮತ್ತು ಮಾಸ್ಕ್ ಧರಿಸುವ ಮಾರ್ಗಸೂಚಿಗಳನ್ನು ಜನರು ಪಾಲಿಸುತ್ತಿಲ್ಲ. ಇದು ಕಳವಳಕ್ಕೆ ಗಂಭೀರ ಕಾರಣವಾಗಿದೆ ಎಂದು ಆರೋಗ್ಯ, ಎನ್‌ಐಟಿಐ ಆಯೋಗದ ಸದಸ್ಯ ಡಾ ವಿ.ಕೆ.ಪಾಲ್ ಹೇಳಿದರು.

ಪ್ರವಾಸಿ ಸ್ಥಳಗಳಲ್ಲಿ ಜನರು ಗುಂಪು ಗುಂಪಾಗಿ ಸೇರುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಯಿತು. ಪ್ರವಾಸಿ ತಾಣಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ ಎಂದು ಡಾ. ಪೌಲ್ ತಿಳಿಸಿದರು. 

ಗರ್ಭಿಣಿಯರು ಲಸಿಕೆ ಪಡೆಯುವುದು ಅತೀ ಮುಖ್ಯ. 'ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಮಾರ್ಗಸೂಚಿಗಳನ್ನು ಸಚಿವಾಲಯ ಹೊರಡಿಸಿದೆ. ಮೂರು ಲಸಿಕೆಗಳನ್ನು ಬಳಸಲು ಅರ್ಹತೆ ಇದೆ. ಗರ್ಭಾವಸ್ಥೆಯಲ್ಲಿ ಮಹಿಳೆಗೆ ಕೋವಿಡ್ ಸೋಂಕು ತಗುಲಿದರೆ ಅದರ ಗಂಭೀರತೆ ಹೆಚ್ಚಾಗುತ್ತದೆ ಪೂರ್ವ-ಪ್ರಬುದ್ಧ ಹೆರಿಗೆಯ ತೊಂದರೆಗಳು ಮತ್ತು ಸಾಧ್ಯತೆಗಳು ಸಹ ಹೆಚ್ಚಿವೆ. ಇದು ಮಹಿಳೆಯ ಆರೋಗ್ಯ ಹಾಗೂ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಮುಟ್ಟಿನ ಸಮಯದಲ್ಲಿ ಲಸಿಕೆಗಳನ್ನು ನೀಡಬಹುದು ಮತ್ತು ಬಂಜೆತನದ ಅಪಾಯವಿಲ್ಲ ಎಂದು ಡಾ ಪಾಲ್ ಹೇಳಿದರು.

SCROLL FOR NEXT