ಬಾಲಕಿ ಕಳ್ಳ ಸಾಗಣೆ (ಸಂಗ್ರಹ ಚಿತ್ರ) 
ದೇಶ

ತಂದೆಯಿಂದ ನಿರಂತರ ಅತ್ಯಾಚಾರ, ತಪ್ಪಿಸಿಕೊಂಡು ಬಂದು ಸೆಕ್ಸ್ ದಂಧೆಕೋರರ ಕೈಗೆ ಸಿಕ್ಕಿ ಬಿದ್ದ ಬಾಲಕಿ ರಕ್ಷಣೆ!

ಸ್ವಂತ ತಂದೆಯಿಂದಲೇ ನಿರಂತರವಾಗಿ ಅತ್ಯಾಚಾರಕ್ಕೊಳಗಾಗಿ ತೀವ್ರ ನೊಂದು ಆತನಿಂದ ತಪ್ಪಿಸಿಕೊಂಡು ಓಡಿ ಬಂದು ಸೆಕ್ಸ್ ದಂಧೆಕೋರರ ಕೈಗೆ ಸಿಕ್ಕಿ ಬಿದಿದ್ದ ಬಿಹಾರದ ಮೂಲದ ಅಪ್ರಾಪ್ತ ಬಾಲಕಿಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೊಲೀಸರು ರಕ್ಷಿಸಿದ್ದಾರೆ.

ಬೆಂಗಳೂರು: ಸ್ವಂತ ತಂದೆಯಿಂದಲೇ ನಿರಂತರವಾಗಿ ಅತ್ಯಾಚಾರಕ್ಕೊಳಗಾಗಿ ತೀವ್ರ ನೊಂದು ಆತನಿಂದ ತಪ್ಪಿಸಿಕೊಂಡು ಓಡಿ ಬಂದು ಸೆಕ್ಸ್ ದಂಧೆಕೋರರ ಕೈಗೆ ಸಿಕ್ಕಿ ಬಿದಿದ್ದ ಬಿಹಾರದ ಮೂಲದ ಅಪ್ರಾಪ್ತ ಬಾಲಕಿಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೊಲೀಸರು ರಕ್ಷಿಸಿದ್ದಾರೆ.

ಶುಕ್ರವಾರ (ಜುಲೈ 9) ಬಿಹಾರಕ್ಕೆ ತೆರಳುವ ದಾನಾಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಕೆಯನ್ನು ಅಪರಿಚಿತ ಸ್ಥಳಕ್ಕೆ ಸಾಗಿಸುತ್ತಿದ್ದಾಗ ಕೃಷ್ಣರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಶೋಧ ನಡೆಸಿದ್ದ ವೇಳೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30 ರ  ಸುಮಾರಿನಲ್ಲಿ ರೈಲಿನಲ್ಲಿ ಶೋಧ ನಡೆಸುತ್ತಿದ್ದಾಗ 15 ವರ್ಷದ ಬಾಲಕಿಯನ್ನು ಗಮನಿಸಿದ ಅಧಿಕಾರಿಗಳು ಆಕೆಯನ್ನು ಮಾತನಾಡಿಸಿದ್ದಾರೆ. ಈ ವೇಳೆ ಬಾಲಕಿ ತುಂಬಾ ಭಯಭೀತಳಾಗಿದ್ದಳು. ಆಕೆ ನೀಡಿದ ಮಾಹಿತಿ ಮೇರೆಗೆ ಕೂಡಲೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಆಕೆಯನ್ನು ರಕ್ಷಿಸಿದ್ದಾರೆ.

'ಬಿಹಾರದ ಪೂರ್ವಿ ಚಂಪಾರನ್ (ಮೋತಿಹಾರಿ) ನಿವಾಸಿ ಎಂದು ಹೇಳಿಕೊಂಡ ಬಾಲಕಿ ತನ್ನ ತಂದೆಯಿಂದ ಪದೇ ಪದೇ ನಡೆಯುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಿಂದಾಗಿ ಬೇಸತ್ತು ಮನೆಯಿಂದ ಓಡಿಹೋಗಿದ್ದಳು. ಈ ವಿಚಾರ ಆಕೆಯ ತಾಯಿಗೂ ತಿಳಿದಿತ್ತಾದರೂ ಆಕೆ ಮಧ್ಯಪ್ರವೇಶಿಸುತ್ತಿರಲಿಲ್ಲ. ಅಲ್ಲದೆ  ಅಪ್ರಾಪ್ತೆಯಾದ ಆಕೆಯನ್ನು ಮದುವೆ ಮಾಡಿಸಲು ಆಕೆಯ ಪೋಷಕರು ಸಿದ್ಧತೆ ನಡೆಸಿದ್ದರು. ಇದರಿಂದ ಬೇಸರಗೊಂಡ ಆಕೆ ಮನೆಯಿಂದ ಪರಾರಿಯಾಗಿದ್ದಳು.

ಬೆಂಗಳೂರಿಗೆ ಬಂದಿದ್ದ ಆಕೆಗೆ ಕೆಲ ದುಷ್ಕರ್ಮಿಗಳು ಡ್ರಗ್ಸ್ ನೀಡಿ ಆಕೆಯನ್ನು ಅಪಹರಿಸಿದ್ದರು. ಕಂಟೈನರ್ ನಲ್ಲಿಟ್ಟು ಆಕೆಯನ್ನು ಸುಮಾರು 1 ತಿಂಗಳ ಕಾಲ ಪೀಡಿಸಿದ್ದರು. ಬಳಿಕ ರೈಲಿನಲ್ಲಿ ಬೇರೊಂದು ಸ್ಥಳಕ್ಕೆ ಕಳ್ಳಸಾಗಣೆ ಮಾಡುವಾಗ ಶಕ್ತಿ ತಂಡದ ಸಿಬ್ಬಂದಿಗಳು ಆಕೆಯನ್ನು ಗುರುತಿಸಿ ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಬಾಲಕಿಯನ್ನು ಕೆಎಸ್‌ಆರ್ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಆಕೆಯ ಸುರಕ್ಷತೆಗಾಗಿ ಡಾನ್ ಬಾಸ್ಕೊ ಹೋಮ್‌ಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳ ತಿಳಿಸಿವೆ. ಪೋಸ್ಕೋ ಕಾಯ್ದೆ ಮತ್ತು ಇತರೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT