ದೇಶ

ರಾಷ್ಟ್ರೀಯ ಹೆದ್ದಾರಿಗಳ ಪಕ್ಕ ಟೌನ್‌ ಶಿಪ್‌ ನಿರ್ಮಾಣ

Srinivas Rao BV

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಸಮೀಪ ಕೈಗಾರಿಕಾ ಸಮೂಹಗಳು, ಲಾಜಿಸ್ಟಿಕ್ಸ್ ಪಾರ್ಕ್ ಗಳು, ಸ್ಮಾರ್ಟ್ ಸಿಟಿಗಳು ಹಾಗೂ ​​ಟೌನ್ ಶಿಪ್ ಗಳ ನಿರ್ಮಾಣಕ್ಕೆ ಅನುಮತಿ ಕಲ್ಪಿಸುವ ಸಂಬಂಧ ಸಂಪುಟ ಟಿಪ್ಪಣಿ ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ರಸ್ತೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವರ್ಚುವಲ್ ಮಾದರಿಯಲ್ಲಿ ಆಯೋಜಿಸಲಾಗಿದ್ದ  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ  ಅವರು,  ವಿಶ್ವ ದರ್ಜೆ ಮಾನದಂಡಗಳು, ಸೌಲಭ್ಯಗಳೊಂದಿಗೆ  ಹೆದ್ದಾರಿ ಜಾಲವನ್ನು ನಿರ್ಮಿಸುವುದು  ಇದರ  ಉದ್ದೇಶವಾಗಿದೆ ಎಂದು ಅವರು ಹೇಳಿದರು. ಹಾಲಿ ಇರುವ  ಹೆದ್ದಾರಿ  ಯೋಜನೆಗಳನ್ನು ವಿಕ್ರಯಿಸುವ ಯೋಜನೆಯನ್ನು  ಸಿದ್ದಪಡಿಸಲಾಗಿದೆ.

400  ಪ್ರದೇಶಗಳಲ್ಲಿ ಹೆದ್ದಾರಿಗಳ ಪಕ್ಕದಲ್ಲಿಯೇ 2.5 ಲಕ್ಷ ಕೋಟಿ ರೂ.ವೆಚ್ಚದಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸಲು ಸಚಿವಾಲಯ ಯೋಜಿಸುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ. 

ಮೂಲಸೌಕರ್ಯ ನಿಧಿಯನ್ನು ಈ ವರ್ಷ ಶೇ 34 ರಷ್ಟು ಹೆಚ್ಚಳಗೊಳಿಸಿ 5.54 ಲಕ್ಷ ಕೋಟಿರೂಗೆ ಹೆಚ್ಚಿಸಲಾಗಿದೆ. ಮೂಲಸೌಕರ್ಯವಲಯದಲ್ಲಿ ಹೂಡಿಕೆ ಹೆಚ್ಚಳ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ.

SCROLL FOR NEXT