ಚಾತರ್ ಪುರ: ಮಧ್ಯ ಪ್ರದೇಶದ ಚಾತರ್ ಪುರ ಜಿಲ್ಲೆಯ ಬಿಜಾವರ್ ಪ್ರದೇಶದ ಮಹುವಾಜಾಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಆರು ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ನೀರಿನ ಕೊಳವೊಂದರಿಂದ ಬಳಿ ಅಳವಡಿಸಲಾಗಿದ್ದ ವಿದ್ಯುತ್ ತಂತಿಯು ವ್ಯಕ್ತಿಯೊಬ್ಬರಿಗೆ ತಗುಲಿದ್ದು, ಆತನನ್ನು ಕಾಪಾಡಲು ಹೋದ ಸಂಬಂಧಿಕರಿಗೂ ವಿದ್ಯುತ್ ಸ್ಪರ್ಶವಾಗಿದೆ. ಈ ದುರಂತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಂತರ ಗ್ರಾಮಸ್ತರಲ್ಲಿ ಆತಂಕ ಮನೆ ಮಾಡಿದೆ. ವಾಸ್ತವವಾಗಿ, ಟ್ಯಾಂಕ್ ತೆರೆಯಲು, ಮನೆಯ ಸದಸ್ಯರೊಬ್ಬರು ಟ್ಯಾಂಕ್‌ಗೆ ಇಳಿದಾಗ ವಿದ್ಯುತ್ ತಗುಲಿದೆ.ಮನೆಯ ಮತ್ತೊಬ್ಬ ಸದಸ್ಯ ಅವನನ್ನು ಉಳಿಸಲು ಇಳಿದಾಗಲೂ ಅದೇ ರೀತಿಯಾಗಿ ಒಬ್ಬರಿಗೊಬ್ಬರಿಗೆ ಎಂದು ಆರು ಮಂದಿ ವಿದ್ಯುತ್ ಆಘಾತದಿಂದ ಸಾವಿಗೀಡಾಗಿದ್ದಾರೆ. ಮೃತರನ್ನು ಲಕ್ಷ್ಮಣ್ ಅಹಿರ್ವಾರ್, ಶಂಕರ್ ಅಹಿರ್ವಾರ್, ಮಿಲನ್ ಅಹಿರ್ವಾರ್, ನರೇಂದ್ರ, ರಾಂಪ್ರಸಾದ್ ಮತ್ತು ವಿಜಯ್ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಉಸ್ತುವಾರಿ ಮುಖೇಶ್ ಠಾಕೂರ್ ಪೊಲೀಸ್ ಪಡೆಯೊಂದಿಗೆ ಆಗಮಿಸಿದ್ದಾರೆ. ಅದೇ ಸಮಯ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ದುರ್ಘಟನೆಗೆ ಸಂತಾಪ ಸೂಚಿಸಿದ್ದಾರೆ.