ದೇಶ

ಕೇರಳ ರಾಜಧಾನಿಯಲ್ಲಿ ಇನ್ನೂ ಎರಡು ಜಿಕಾ ವೈರಸ್ ಪ್ರಕರಣ ಪತ್ತೆ

Nagaraja AB

ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಜಿಕಾ ವೈರಸ್ ಮಂಗಳವಾರ ದೃಢಫಟ್ಟಿದೆ. ತಿರುವನಂತಪುರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೊಸದಾಗಿ ಪರಿಚಯಿಸಲಾದ ಪರೀಕ್ಷಾ ಸೌಲಭ್ಯವನ್ನು ಬಳಸಿಕೊಂಡು ಪೂಂಟುರಾದ 35 ವರ್ಷದ ವ್ಯಕ್ತಿಯಲ್ಲಿ ಸೋಮವಾರ ಜಿಕಾ ವೈರಸ್ ಪತ್ತೆಯಾಗಿದೆ. 

ಇದು  ನಗರದ ಖಾಸಗಿ ಆಸ್ಪತ್ರೆಯಲ್ಲಿ ಪತ್ತೆಯಾಗಿರುವ ಎರಡನೇ ಕೇಸ್ ಆಗಿದೆ. ಆಕೆಯ ಮಾದರಿಯನ್ನು ಕೊಯಂಬತ್ತೂರಿನಲ್ಲಿ ಪರೀಕ್ಷಿಸಲಾಗಿದೆ. ತಿರುವನಂತಪುರಂನಿಂದಲೇ ಎಲ್ಲಾ 21 ಜಿಕಾ ಕೇಸ್ ಗಳು ವರದಿಯಾಗಿವೆ. ಜುಲೈ 8 ರಂದು ಗರ್ಭಿಣಿ ಮಹಿಳೆಯರಲ್ಲಿ ಮೊದಲ ಕೇಸ್ ಪತ್ತೆಯಾಗಿತ್ತು.

ತಿರುವನಂತಪುರಂ, ಅಲಾಪ್ಫುಝಾ, ತ್ರಿಸೂರ್ ಮತ್ತು ಕೊಝಿಕೋಡ್ ಮೆಡಿಕಲ್ ಕಾಲೇಜ್ ಗಳಲ್ಲಿ ಜಿಕಾ ಪರೀಕ್ಷಾ ಸೌಕರ್ಯವನ್ನು ಆರೋಗ್ಯ ಇಲಾಖೆ ಸ್ಥಾಪಿಸಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಿಂದ 2100 ಪರೀಕ್ಷಾ ಕಿಟ್ ಗಳನ್ನು ಖರೀದಿಸಲಾಗಿದೆ. ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಜಿಕಾ ವೈರಸ್ ಪತ್ತೆಯಾಗಿ ತಿರುವನಂತಪುರಂ ವೈದ್ಯಕೀಯ ಕಾಲೇಜ್ ಆಸ್ಪತ್ರೆ 500 ಟ್ರಿಪ್ಲೇಕ್ಸ್ ಕಿಟ್ ಗಳನ್ನು ಪಡೆಯಲಾಗಿದೆ. ಈ ಆಸ್ಪತ್ರೆಯಲ್ಲಿ ಒಂದು ಜಿಕಾ ಮತ್ತೊಂದು ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. 

ಆರ್ ಟಿ- ಪಿಸಿಆರ್ ಮೂಲಕ ರಕ್ತ ಮತ್ತು ಮೂತ್ರ ಮಾದರಿಯನ್ನು ಪರೀಕ್ಷಿಸಿದಾಗ ಜಿಕಾ ಪತ್ತೆಯಾಗಿದೆ. ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ರಕ್ತದ ಮಾದರಿ ಬಳಸಲು ಶಿಫಾರಸು ಮಾಡಿತು .ಜಿಕಾ ವೈರಸ್ ಸೋಂಕಿತ ವ್ಯಕ್ತಿಯ ಐದು ಮಿಲಿಲೀಟರ್ ರಕ್ತವನ್ನು ಸಂಗ್ರಹಿಸಲಾಗುವುದು ಮತ್ತು ಆರ್ ಟಿ-ಪಿಸಿಆರ್ ಪರೀಕ್ಷೆ ನಡೆಸಲು ಅದನ್ನು ಸೀರಮ್ ನ್ನು ಬೇರ್ಪಡಿಸಲಾಗುತ್ತದೆ. 

ಆರಂಭದಲ್ಲಿ ಫಲಿತಾಂಶಗಳನ್ನು ಪಡೆಯಲು ಎಂಟು ಗಂಟೆಗಳವರೆಗೆ ಇದು ಅಗತ್ಯವಾಗಿರುತ್ತದೆ. ವೈರಸ್ ನಂತಹ ನಿರ್ದಿಷ್ಟ ಜೀವಿಗಳಿಂದ ಆನುವಂಶಿಕ ವಸ್ತುಗಳನ್ನು ಕಂಡುಹಿಡಿಯಲು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೋವಿಡ್ -19 ರ ಸಂದರ್ಭದಲ್ಲಿ, ಪಿಸಿಆರ್ ಪರೀಕ್ಷೆಯನ್ನು ನಡೆಸಲು ಮೂಗಿನ ಸ್ವ್ಯಾಬ್‌ಗಳನ್ನು ಬಳಸಲಾಗುತ್ತದೆ.

SCROLL FOR NEXT