ದೇಶ

ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿಗೆ 'ಗೂಗಲ್ ಡೂಡಲ್' ಗೌರವ

Raghavendra Adiga

ನವದೆಹಲಿ: ಭಾರತದಲ್ಲಿ ವೈದ್ಯರಾಗಿ ತರಬೇತಿ ಪಡೆದ ಮೊದಲ ಮಹಿಳೆ ಡಾ. ಕದಂಬಿನಿ ಗಂಗೂಲಿ ಅವರ ಜೀವನ ಮತ್ತು ಸೇವೆಯನ್ನು ಗೂಗಲ್ ಈ ದಿನ ವಿಶೇಷವಾಗಿ ಗೌರವಿಸಿದೆ. ಗಂಗೂಲಿ ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ಮೊದಲ ಮಹಿಳೆ, ಆಕೆ 1886 ರಲ್ಲಿ ಪದವಿ ಪಡೆದಿದ್ದರು.

ಇಂದಿನ ಗೂಗಲ್ ಡೂಡಲ್, ಬೆಂಗಳೂರು ಮೂಲದ ಅತಿಥಿ ಕಲಾವಿದ ಒಡ್ರಿಜಾ ವಿನ್ಯಾಸಗೊಳಿಸಿದ್ದಾಗಿದೆ., ಗಂಗೂಲಿಯ 160 ನೇ ಹುಟ್ಟುಹಬ್ಬದ ಸಂದರ್ಭವನ್ನು ಇದು ಸಂಕೇತಿಸಿದೆ.  ದೇಶಾದ್ಯಂತದ ಭಾರತೀಯ ಮಹಿಳೆಯರನ್ನು ಉನ್ನತ ಸ್ಥಾನದಲ್ಲಿರಿಸುವ ಅವರ ಆದರ್ಶಪ್ರಾಯವಾದ ಕೆಲಸದ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಇದಾಗಿದೆ.  ಅವರು ಭಾರತದ ಮಹಿಳೆಯರ ಹಕ್ಕುಗಳ ಹೋರಾಟದಲ್ಲಿ  ವೈದ್ಯಕೀಯ ಸೇವೆ ಮತ್ತು ಕ್ರಿಯಾಶೀಲತೆ ಎರಡರಲ್ಲೂ ಕೆಲಸ ಮಾಡಿದರು. 1889 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ನಿಯೋಗವನ್ನು ರಚಿಸಿದ್ದ ವೇಳೆ ಆರು ಮಹಿಳೆಯರ ಪೈಕಿ ಗಂಗೂಲಿ ಸಹ ಅವರಲ್ಲೊಬ್ಬರಾಗಿದ್ದರು.

ತನ್ನ ಶಿಕ್ಷಣದ ದೃಷ್ಟಿಯಿಂದ, ಗಂಗೂಲಿ ಕೋಲ್ಕತ್ತಾದಿಂದ ತನ್ನ ವೈದ್ಯಕೀಯ ಪದವಿಯನ್ನು ಪಡೆದ ನಂತರ , ಸ್ತ್ರೀರೋಗ ಶಾಸ್ತ್ರದಲ್ಲಿ ವಿಶೇಷ ವ್ಯಾಂಸಂಗ ಮಾಡಿ ಮೂರು ಹೆಚ್ಚುವರಿ ಡಾಕ್ಟರೇಟ್ ಪದವಿ ಪಡೆದರು. ಆ ಯುಗದಲ್ಲಿ ಮಹಿಳೆಯರಿಗೆ ಅಪರೂಪದ ಸಾಧನೆ ಇದಾಗಿತ್ತು,ಅವರು ತಮ್ಮದೇ ಆದ ಖಾಸಗಿ ಕ್ಲಿನಿಕ್ ಪ್ರಾರಂಭಿಸಲು 1890 ರ ದಶಕದಲ್ಲಿ ಭಾರತಕ್ಕೆ ಮರಳಿದರು.

ಗಂಗೂಲಿಯ ಜೀವನವನ್ನು ಆಧರಿಸಿದ 2020 ರ “ಪ್ರೊಥೋಮಾ ಕದಂಬಿನಿ” ಜೀವನಚರಿತ್ರೆ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿತ್ತು.

ಕೊರೋನಾ ಸಾಂಕ್ರಾಮಿಕಕ್ಕೆ ಜಗತ್ತು ಒಂದು ವರ್ಷ ಮೀರಿ ಸಿಲುಕಿರುವ ಸಮಯದಲ್ಲಿ ಗೂಗಲ್‌ನ ಗೌರವ ವಿಶೇಷವಾಗಿದೆ.ವೈದ್ಯರು, ವೈದ್ಯಕೀಯ ವೃತ್ತಿಪರರು ವಹಿಸಿದ ಪ್ರಮುಖ ಪಾತ್ರವು ಸಮಾಜಕ್ಕೆ ಎಂದಿಗೂ ಅನಿವಾರ್ಯ ಅಂತಹ ಸಮಯದಲ್ಲಿ, ಭಾರತದಲ್ಲಿನ ವೈದ್ಯಕೀಯ ಮೂಲಸೌಕರ್ಯಕ್ಕೆ ಗಂಗೂಲಿ ನೀಡಿದ ಕೊಡುಗೆ ಮತ್ತು ಇತರರಿಗೆ ಸಹಾಯ ಮಾಡುವ ಅವರ ಮನೋಭಾವ ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ಸಾಂಕ್ರಾಮಿಕ ರೋಗದ ಸನ್ನಿವೇಶದುದ್ದಕ್ಕೂ ನಮ್ಮ ಮುಂಚೂಣಿ ಕಾರ್ಯಕರ್ತರು ಮಾಡಿದ ನಿಸ್ವಾರ್ಥ ಕಾರ್ಯವನ್ನು ಇದು ಮತ್ತೊಮ್ಮೆ ನೆನೆಯುವಂತೆ ಮಾಡಿದೆ.

SCROLL FOR NEXT