ದೇಶ

ಡಿಎ, ಡಿಆರ್ ಏರಿಕೆ: ಸಂಪುಟ ನಿರ್ಧಾರ ಜಾರಿಗೆ ಹಣಕಾಸು ಸಚಿವಾಲಯ ಆದೇಶ; 48 ಲಕ್ಷ ಉದ್ಯೋಗಿಗಳು, 65 ಲಕ್ಷ ಪಿಂಚಣಿದಾರರಿಗೆ ಲಾಭ

Srinivas Rao BV

ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ (ಡಿಯರ್ ನೆಸ್ ಅಲೋಯನ್ಸ್) ಹಾಗೂ ಡಿಯರ್ ನೆಸ್ ರಿಲೀಫ್ ಹೆಚ್ಚಳ ಮಾಡುವ ಸಂಪುಟ ನಿರ್ಧಾರವನ್ನು ಜು.1 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲು ಹಣಕಾಸು ಸಚಿವಾಲಯ ಆದೇಶ ನೀಡಿದೆ. 

ಹೊಸ ನಿರ್ಧಾರ ಜಾರಿಗೆ ಬರುವುದರಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳಿಹೆ ಹಾಗೂ ಪಿಂಚಣಿದಾರರಿಗೆ ಈ ವರೆಗೂ ಇದ್ದ ಶೇ.17 ರಷ್ಟು ಡಿಎ, ಡಿ.ಆರ್ ಈಗ ಶೇ.28 ಕ್ಕೆ ಏರಿಕೆಯಾಗಲಿದ್ದು ಕೇಂದ್ರ ಸರ್ಕಾರದ 48 ಲಕ್ಷ ಉದ್ಯೋಗಿಗಳು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಮೂಲ ವೇತನದ ಶೇ.28 ರಷ್ಟು ಡಿ.ಎ, ಡಿಆರ್ ಏರಿಕೆಯಾಗಿ ಲಾಭವಾಗಲಿದೆ. 2020 ರ ಜನವರಿ 1, 2020 ರ ಜುಲೈ 1 ಹಾಗೂ 2021 ರ ಜನವರಿ, 1 ರ ಕಂತುಗಳನ್ನೂ ಈ ಏರಿಕೆಯ ಮೊತ್ತ ಒಳಗೊಂಡಿರುತ್ತದೆ. 

ರಕ್ಷಣಾ ಸೇವೆಗಳ ಅಂದಾಜು ಮೂಲಕ ವೇತನ ಪಡೆಯುತ್ತಿರುವ ನೌಕರರಿಗೂ ಈ ಆದೇಶ ಅನ್ವಯವಾಗಲಿದೆ. ಸೇನಾ ಪಡೆಗಳ ಸಿಬ್ಬಂದಿ ಮತ್ತು ರೈಲ್ವೆ ನೌಕರರಿಗೆ ಅದಕ್ಕೆ ಸಂಬಂಧಿಸಿದ ಸಚಿವಾಲಯಗಳಿಂದ ಪ್ರತ್ಯೇಕ ಆದೇಶ ಜಾರಿಯಾಗಲಿದೆ" ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಎ ಹೆಚ್ಚಳಕ್ಕೆ 2021 ರ ಜೂ.30 ರವರೆಗೂ ತಡೆಯೊಡ್ಡಿತ್ತು. 

SCROLL FOR NEXT