ಸಿಧು-ಅಮರಿಂದರ್ ಸಿಂಗ್ 
ದೇಶ

ನವಜೋತ್ ಸಿಂಗ್ ಸಿಧು ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿರುವ ಸಿಎಂ ಅಮರಿಂದರ್ ಸಿಂಗ್

 ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪಕ್ಷದ ಶಾಸಕರನ್ನು ಜು.23 ರಂದು "ಚಹಾ"ಕೂಟಕ್ಕೆ ಆಹ್ವಾನಿಸಿದ್ದು, ಅಲ್ಲಿಂದ ಎಲ್ಲರೂ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. 

ಚಂಡೀಗಢ: ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪಕ್ಷದ ಶಾಸಕರನ್ನು ಜು.23 ರಂದು "ಚಹಾ"ಕೂಟಕ್ಕೆ ಆಹ್ವಾನಿಸಿದ್ದು, ಅಲ್ಲಿಂದ ಎಲ್ಲರೂ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. 

ನವಜೋತ್ ಸಿಂಗ್ ಸಿಧು ಜು.23 ರಂದು ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿಧು ಅವರನ್ನು ಭೇಟಿ ಮಾಡುವುದಕ್ಕೂ ನಿರಾಕರಿಸುತ್ತಿದ್ದ ಸಿಎಂ ಅಮರಿಂದರ್ ಸಿಂಗ್ ಈಗ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿರುವುದು ಪಂಜಾಬ್ ನಲ್ಲಿ ಅರಿಂದರ್ ಸಿಂಗ್-ಸಿಧು ನಡುವಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವ ಸೂಚನೆಯಾಗಿದೆ. 

ಸಿಎಂ ಮಾಧ್ಯಮ ಸಲಹೆಗಾರರ ಟ್ವೀಟ್ ನ ಪ್ರಕಾರ ನೂತನವಾಗಿ ನೇಮಕಗೊಂಡಿರುವ್ ಕುಲ್ಜೀತ್ ಸಿಂಗ್ ನಗ್ರಾ, ಸಂಗತ್ ಸಿಂಗ್ ಗಿಲ್ಜಿಯಾನ್ ಅಮರಿಂದರ್ ಸಿಂಗ್ ಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಿದ್ದರು ಎಂದು ತಿಳಿಸಿದ್ದಾರೆ. 
 
ಅಮರಿಂದರ್ ಸಿಂಗ್ ವಿರುದ್ಧ ಸಿಧು ಅವಹೇಳನಕಾರಿ ಟ್ವೀಟ್, ಆರೋಪ ಮಾಡಿದ್ದರಿಂದ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅಮರಿಂದರ್ ಸಿಂಗ್ ಅವರು "ನನ್ನ ವಿರುದ್ಧ ಸಿಧು ಮಾಡಿದ್ದ ಅವಹೇಳನಕಾರಿ ಟ್ವೀಟ್ ಗಳಿಗೆ ಕ್ಷಮೆ  ಕೋರುವವರೆಗೂ ಭೇಟಿ ಸಾಧ್ಯವಿಲ್ಲ" ಎಂದು ಹೇಳಿದ್ದರು. ಮುಖ್ಯಮಂತ್ರಿಗಳ ಈ ನಿಲುವಿನಲ್ಲಿ ಯಾವುದೇ ಬದಲಾವಣೆಗಳೂ ಇಲ್ಲ ಎಂದು ಸಿಎಂ ಸಲಹೆಗಾರ ರವೀನ್ ತುಕ್ರಾಲ್ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!