ದೇಶ

ಕೊಂಕಣ ರೈಲು ಸೇವೆಗೆ ಮಳೆ ಅಡ್ಡಿ: ಮಹಾರಾಷ್ಟ್ರದಲ್ಲಿ ಸಿಲುಕಿದ 6000 ಪ್ರಯಾಣಿಕರು 

Srinivas Rao BV

ಮುಂಬೈ: ಕೊಂಕಣ ರೈಲು ಸೇವೆಗೆ ಮಳೆ ಅಡ್ಡಿ ಉಂಟಾಗಿದ್ದು ಕೊಂಕಣ ರೈಲ್ವೆ ಮಾರ್ಗದಲ್ಲಿ 6,000 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. 

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಕೊಂಕಣ ಮಾರ್ಗದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ತೀವ್ರ ಮಳೆಯ ಪರಿಣಾಮ ನದಿ ಉಕ್ಕಿ ಹರಿದಿದ್ದು, ರಸ್ತೆ ಹಾಗೂ ರೈಲು ಮಾರ್ಗದ ಸೇವೆಗಳಿಗೆ ಅಡ್ಡಿಯುಂಟಾಗಿದೆ. 

ರಕ್ಷಣಾ ಕಾರ್ಯಾಚರಣೆಗೆ ಮುಂಬೈ ಅಧಿಕಾರಿಗಳು ಎನ್ ಡಿಆರ್ ಎಫ್ ನ ಸಹಾಯ ಕೋರಿದ್ದಾರೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಈ ವರೆಗೂ 9 ರೈಲುಗಳ ಮಾರ್ಗವನ್ನು ಬದಲಾವಣೆ, ಸ್ಥಗಿತ ಹಾಗೂ ಅಲ್ಪಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ರತ್ನಗಿರಿ ಹಾಗೂ ರಾಯ್ ಗಢ ಜಿಲ್ಲೆಯಲ್ಲಿನ ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ಭಾಗದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಮಹಾರಾಷ್ಟ್ರದ ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT