ದೇಶ

ಆಗಸ್ಟ್ 18 ರವರೆಗೆ ಚಾರ್ ಧಾಮ್ ಯಾತ್ರೆಯನ್ನು ನಿರ್ಬಂಧಿಸಿದ ನೈನಿತಾಲ್ ಹೈಕೋರ್ಟ್ 

Nagaraja AB

ನೈನಿತಾಲ್: ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯಿಂದಾಗಿ ಆಗಸ್ಟ್ 18ರವರಗೆ ಚಾರ್ ಧಾಮ್ ಯಾತ್ರೆಯನ್ನು ನೈನಿತಾಲ್ ಹೈಕೋರ್ಟ್ ಬುಧವಾರ ನಿರ್ಬಂಧಿಸಿದೆ.

ರಾಜ್ಯದ ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ಸಂಬಂಧಿತ ನಿಯಮಾವಳಿಗಳನ್ನು ಅನುಸರಿಸದಿದ್ದಕ್ಕಾಗಿ ನ್ಯಾಯಾಲಯವು ಉತ್ತರಾಖಂಡ ಸರ್ಕಾರವನ್ನು ತೀವ್ರವಾಗಿ ಖಂಡಿಸಿದೆ.

ಮೇ.14ರಿಂದ ಆರಂಭವಾಗಬೇಕಿದ್ದ ಚಾರ್ ಧಾಮ್ ಯಾತ್ರೆಯನ್ನು ಈ ಮುಂಚೆ ಕೋವಿಡ್ ಕಾರಣಕ್ಕಾಗಿ ರದ್ದುಗೊಳಿಸಲಾಗಿತ್ತು. ಆದರೆ, ರುದ್ರಪ್ರಯಾಗ ಜಿಲ್ಲೆಯಲ್ಲಿ ಕೇದಾರನಾಥ ದೇಗುಲ, ಚಮೋಲಿಯಲ್ಲಿ ಬದ್ರಿನಾಥ್ ಹಾಗೂ ಉತ್ತರಕಾಶಿಯಲ್ಲಿನ ಯಮುನೋತ್ರಿ, ಗಂಗೋತ್ರಿ ದೇಗುಲಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿತ್ತು.

ಬದ್ರಿನಾಥ್, ಕೇದಾರ್ ನಾಥ್ ಮತ್ತು ಗಂಗೋತ್ರಿ ಉತ್ತರಾಖಂಡದ ನಾಲ್ಕು ಪ್ರಮುಖ ಯಾತ್ರಾ ತಾಣಗಳಾಗಿದ್ದು, ಜುಲೈ 28 ರವರೆಗೂ ಚಾರ್ ಧಾಮ್ ಯಾತ್ರೆಗೆ ತಡೆಯನ್ನು ಹೈಕೋರ್ಟ್ ನೀಡಿತ್ತು. ಇಂದು ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಮತ್ತೆ ಆಗಸ್ಟ್ 18ರವರೆಗೆ ಚಾರ್ ಧಾಮ್ ಯಾತ್ರೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಿತು.

SCROLL FOR NEXT