ದೇಶ

ಪೆಗಾಸಸ್ ಹಗರಣ: ಸಂಸತ್ ಕಲಾಪಕ್ಕೆ ಅಡ್ಡಿಯಿಂದ 130 ಕೋಟಿ ರೂ. ತೆರಿಗೆದಾರರ ಹಣ ವ್ಯರ್ಥ 

Nagaraja AB

ನವದೆಹಲಿ: ಪೆಗಾಸಸ್ ಸ್ನೂಪಿಂಗ್ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪದೇ ಪದೇ ಸಂಸತ್ ಕಲಾಪಕ್ಕೆ ಅಡ್ಡಿಯಿಂದಾಗಿ ರೂ. 130 ಕೋಟಿ ಗೂ ಹೆಚ್ಚು ತೆರಿಗೆದಾರರ ಹಣ ವ್ಯರ್ಥವಾಗಿದೆ ಎಂದು ಸರ್ಕಾರದ ಮೂಲಗಳು ಶನಿವಾರ ಹೇಳಿವೆ.

ಜುಲೈ 19 ರಂದು ಸಂಸತ್ ಅಧಿವೇಶನ ಆರಂಭವಾದಾಗಿನಿಂದಲೂ ಈ ವಿಷಯದ ಬಗ್ಗೆ ಚರ್ಚೆಗೆ ಪಟ್ಟು ಹಿಡಿದಿರುವ ಪ್ರತಿಪಕ್ಷಗಳು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರವಾದ ತನಿಖೆಯೊಂದಕ್ಕೆ ಒತ್ತಾಯಿಸುತ್ತಿವೆ. ಪ್ರತಿಪಕ್ಷಗಳ ಬೇಡಿಕೆಗಳನ್ನು ಸರ್ಕಾರ ನಿರಾಕರಿಸಿದೆ.

ಲೋಕಸಭೆಯು ಸಂಭವನೀಯ 54 ಗಂಟೆಗಳ ಪೈಕಿ 7 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದ್ದರೆ, ರಾಜ್ಯಸಭೆ ಸಂಭವನೀಯ 53 ಗಂಟೆಗಳಲ್ಲಿ 11 ಗಂಟೆಗಳ ಕಾಲ ಕಾರ್ಯನಿರ್ವಹಿಸಿದೆ. ಈವರೆಗೆ ಸಂಸತ್ತು 107 ಗಂಟೆಗಳಲ್ಲಿ ಕೇವಲ 18 ಗಂಟೆಗಳು ಮಾತ್ರ ಕಾರ್ಯನಿರ್ವಹಿಸಿದೆ. ಹೀಗಾಗಿ ಸುಮಾರು 89 ಗಂಟೆಗಳ ಕೆಲಸದ ಸಮಯ ವ್ಯರ್ಥವಾಗಿದೆ. ಇದರರ್ಥ ತೆರಿಗೆದಾರರಿಗೆ ಒಟ್ಟು 133 ಕೋಟಿ ರೂಪಾಯಿಗಳಿಗಿಂತ ಹೆಚ್ಚು ನಷ್ಟವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

SCROLL FOR NEXT