ವಿಜಯ್ ಮಲ್ಯ 
ದೇಶ

ಮಲ್ಯಗೆ ಸೇರಿದ 5,646 ಕೋಟಿ ಮೊತ್ತದ ಆಸ್ತಿ, ಷೇರು ಮಾರಾಟ ಮಾಡಲು ಬ್ಯಾಂಕ್ ಗಳಿಗೆ ಅವಕಾಶ!

ಕಿಂಗ್ ಫಿಶರ್ ಏರ್ ಲೈನ್ಸ್ ವೈಫಲ್ಯದೊಂದಿಗೆ ಸಾಲ ತೀರಿಸಲಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಕೆಲ ರಿಯಲ್ ಎಸ್ಟೇಟ್ ಪ್ರಾಪರ್ಟಿ ಹಾಗೂ ಷೇರುಗಳನ್ನು ಎಸ್ ಬಿಐ ನೇತೃತ್ವದ ಬ್ಯಾಂಕ್ ಗಳು ಇದೀಗ ನ್ಯಾಯಾಲಯದ ಆದೇಶದೊಂದಿಗೆ ಮಾರಾಟ ಮಾಡಬಹುದಾಗಿದೆ.

ನವದೆಹಲಿ: ಕಿಂಗ್ ಫಿಶರ್ ಏರ್ ಲೈನ್ಸ್ ವೈಫಲ್ಯದೊಂದಿಗೆ ಸಾಲ ತೀರಿಸಲಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಕೆಲ ರಿಯಲ್ ಎಸ್ಟೇಟ್ ಪ್ರಾಪರ್ಟಿ ಹಾಗೂ ಷೇರುಗಳನ್ನು ಎಸ್ ಬಿಐ ನೇತೃತ್ವದ ಬ್ಯಾಂಕ್ ಗಳು ಇದೀಗ ನ್ಯಾಯಾಲಯದ ಆದೇಶದೊಂದಿಗೆ ಮಾರಾಟ ಮಾಡಬಹುದಾಗಿದೆ.
 
ಎಸ್ ಬಿಐ ನೇತೃತ್ವದಲ್ಲಿನ 11 ಬ್ಯಾಂಕ್ ಗಳ ಒಕ್ಕೂಟ ಮಲ್ಯಗೆ ಸಾಲ ನೀಡಿದ್ದು, ಜಾರಿ ನಿರ್ದೇಶನಾಲಯದಿಂದ ವಶಕ್ಕೆ ಪಡೆದಿರುವ ಮಲ್ಯಗೆ ಸೇರಿದ ಆಸ್ತಿಯನ್ನು ಮರು ಸ್ಥಾಪಿಸುವಂತೆ ಕೋರಿ ಅಕ್ರಮ ಹಣ ವರ್ಗಾಯಣೆ ಕಾಯ್ದೆಯ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದವು. ವಿಶೇಷ ಪಿಎಂಎಲ್ ಎ ನ್ಯಾಯಾಲಯ ಗುರುವಾರ, 5,646 .54 ಕೋಟಿ ಮೊತ್ತದ ಪ್ರಾಪರ್ಟಿಯನ್ನು ಬ್ಯಾಂಕ್ ಗಳಿಗೆ ಕೊಡಲು ಅವಕಾಶ ಕಲ್ಪಿಸಿದೆ.

2002ರ ಎಸ್ ಎಆರ್ ಎಫ್ ಎಇಎಸ್ ಐ ಕಾಯ್ದೆ ಮಾರ್ಗಸೂಚಿಯಂತೆ ವಸೂಲಿ ಪ್ರಕ್ರಿಯೆ ನಡೆಯಲಿದೆ. ಆಸ್ತಿಗಳ ಹರಾಜು ಅಥವಾ ಮಾರಾಟವನ್ನು ಸರಿಯಾದ ಸಮಯದಲ್ಲಿ ಮಾರ್ಗಸೂಚಿಗಳ ಪ್ರಕಾರ ಮಾಡಲಾಗುತ್ತದೆ ಎಂದು ಎಸ್ ಬಿಐನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಸ್ ಬಿಐಗೆ ನೀಡಿದ್ದ 6,900 ಕೋಟಿ ಮೂಲ ಸಾಲದಲ್ಲಿ 1600 ಕೋಟಿ ಬಾಕಿಯಿದೆ.ಉಳಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕ್ರಮವಾಗಿ 800 ಐಡಿಬಿಐ 800, ಬ್ಯಾಂಕ್ ಆಫ್ ಇಂಡಿಯಾ 650, ಬ್ಯಾಂಕ್ ಆಫ್ ಬರೋಡಾ 550, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 410 ಕೋಟಿ ರೂ. ಸಾಲ ಬಾಕಿಯಿದೆ.

ಕಳೆದ ವರ್ಷ ಬಾಗಿಲು ಮುಚ್ಚಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಂಬಂಧಿಸಿದಂತೆ 9 ಸಾವಿರ ಕೋಟಿ ರೂ. ಮೊತ್ತದ ವಂಚನೆ ಪ್ರಕರಣ ವಿಜಯ್ ಮಲ್ಯ ಅವರ ಮೇಲಿದೆ. ಭಾರತಕ್ಕೆ ಹಸ್ತಾಂತರಿಸದಂತೆ ಇಂಗ್ಲೆಂಡ್ ಕೋರ್ಟಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಪ್ರಮುಖ ಭಾರತೀಯ ಬ್ಯಾಂಕ್ ಗಳಿಗೆ ಶೇ.100 ರಷ್ಟು ಸಾರ್ವಜನಿಕ ಹಣವನ್ನು ಹಿಂತಿರುಗಿಸುತ್ತೇನೆ. ಇದನ್ನು ಸರ್ಕಾರ ಒಪ್ಪಿಕೊಳ್ಳುವಂತೆ ವಿಜಯ್ ಮಲ್ಯ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT