ಬೆಂಗಳೂರು ಹಿರಿಯ ನಾಗರಿಕರು ಕೋವಿಡ್-19 ಲಸಿಕೆ ಪಡೆಯುತ್ತಿರುವ ದೃಶ್ಯ 
ದೇಶ

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಲಸಿಕೆ ಹಂಚಿಕೆಯಲ್ಲಿ ಅಮೆರಿಕಾ, ಭಾರತ, ಚೀನಾದ್ದು ಶೇ.60 ರಷ್ಟು ಪಾಲು: ಡಬ್ಲ್ಯುಹೆಚ್ಒ 

ಜಾಗತಿಕ ಮಟ್ಟದಲ್ಲಿ ಈ ವರೆಗೂ ಹಂಚಿಕೆಯಾಗಿರುವ ಎರಡು ಬಿಲಿಯನ್ ಕೋವಿಡ್-19 ಲಸಿಕೆಗಳ ಪೈಕಿ ಅಮೆರಿಕ ಭಾರತ, ಚೀನಾಗೆ ಶೇ.60 ರಷ್ಟು ಪೂರೈಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ವಿಶ್ವಸಂಸ್ಥೆ: ಜಾಗತಿಕ ಮಟ್ಟದಲ್ಲಿ ಈ ವರೆಗೂ ಹಂಚಿಕೆಯಾಗಿರುವ ಎರಡು ಬಿಲಿಯನ್ ಕೋವಿಡ್-19 ಲಸಿಕೆಗಳ ಪೈಕಿ ಅಮೆರಿಕ ಭಾರತ, ಚೀನಾಗೆ ಶೇ.60 ರಷ್ಟು ಪೂರೈಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಡಬ್ಲ್ಯುಹೆಚ್ಒ ಹಿರಿಯ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವಾರದಲ್ಲಿ ಎರಡು ಬಿಲಿಯನ್ ಡೋಸ್ ಗಳಷ್ಟು ಲಸಿಕೆಯನ್ನು ಪೂರ್ಣಗೊಳಿಸುತ್ತೇವೆ. ಇವುಗಳನ್ನು 212 ರಾಷ್ಟ್ರಗಳಿಗೆ ವಿತರಣೆ ಮಾಡಲಾಗಿದೆ. 2 ಬಿಲಿಯನ್ ಡೋಸ್ ಗಳ ಪೈಕಿ ಶೇ.75 ರಷ್ಟು ಕೇವಲ 10 ರಾಷ್ಟ್ರಗಳಿಗೆ ಹೋಗಿವೆ ಎಂದು ಹೇಳಿದ್ದಾರೆ. 

ಶೇ.60 ರಷ್ಟು ಲಸಿಕೆಗಳು, ಭಾರತ, ಚೀನಾ, ಅಮೆರಿಕಾಗೆ ಪೂರೈಕೆ ಮಾಡಲಾಗಿದೆ. 127 ರಾಷ್ಟ್ರಗಳಿಗೆ ಪೂರೈಕೆ ಮಾಡಲಾಗಿರುವ ಕೋವಿಡ್-19 ಲಸಿಕೆಯ ಪೈಕಿ ಕೋವ್ಯಾಕ್ಸ್ ಪ್ರಮುಖ ಪಾತ್ರ ವಹಿಸಿವೆ, ಹಲವು ರಾಷ್ಟ್ರಗಳಿಗೆ ಲಸಿಕೆ ಅಭಿಯಾನ ಪ್ರಾರಂಭಿಸಲು ಸಹಕಾರಿಯಾಗಿದೆ.  ಭಾರತ, ಚೀನಾ, ಅಮೆರಿಕಾಗಳಿಗೆ ಪೂರೈಕೆಯಾಗಿರುವ ಶೇ.60 ರಷ್ಟು ಡೋಸ್ ಗಳು ದೇಶೀಯವಾಗಿ ಸಂಗ್ರಹಿಸಿ ಬಳಕೆ ಮಾಡಲಾಗಿದೆ. 

ಶೇ.0.5 ರಷ್ಟು ಲಸಿಕೆಗಳು ಮಾತ್ರವೇ ಜಾಗತಿಕವಾಗಿ ಅತಿ ಕಡಿಮೆ ಆದಾಯ ಹೊಂದಿದ, ವಿಶ್ವದ ಶೇ.10 ರಷ್ಟು ಜನಸಂಖ್ಯೆ ಹೊಂದಿರುವ ಅತಿ ರಾಷ್ಟ್ರಗಳಿಗೆ ತಲುಪಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT