ದೇಶ

ಕೋವಿಡ್ ರೋಗಿಗಳ ಚಿಕಿತ್ಸಾ ಮಾರ್ಗಸೂಚಿ; ಫೆರಿಪಿರವಿಲ್, ಐವರ್ಮೆಕ್ಟಿನ್, ಎಚ್ಸಿಕ್ಯುಗೆ ಕೊಕ್: ಆರೋಗ್ಯ ಸಚಿವಾಲಯ

Vishwanath S

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಆಂಟಿ-ವೈರಲ್ ಫೆವಿಪಿರವಿರ್ ಬಳಕೆಯನ್ನು ಕೋವಿಡ್ 19 ಚಿಕಿತ್ಸಾ ಮಾರ್ಗಸೂಚಿಯಿಂದ ಸೋಮವಾರ ಕೈಬಿಟ್ಟಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಒಂಬತ್ತು ಪುಟಗಳ ಮಾರ್ಗಸೂಚಿಗಳಲ್ಲಿ ದೇಶಾದ್ಯಂತ ಈ ಔಷಧಿಗಳ ಬಳಕೆಯನ್ನು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ವ್ಯಾಪಕವಾಗಿ ಬಳಸಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ನೀಡಿದ ಹಿಂದಿನ ಮಾರ್ಗಸೂಚಿಗಳಲ್ಲಿ ಐವರ್ಮೆಕ್ಟಿನ್ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಬಳಸುವಂತೆ ಉಲ್ಲೇಖಿಸಲಾಗಿತ್ತು.

ಕೋವಿಡ್ ವಿರುದ್ಧ ಈ ಔಷಧಗಳು ಪರಿಣಾಮಕಾರಿ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲ ಎಂಬುದನ್ನು ತಜ್ಞರು ಪ್ರಸ್ತಾಪಿಸಿದ್ದರು. ಹೀಗಾಗಿ ಕೋವಿಡ್ ಚಿಕಿತ್ಸಾ ಮಾರ್ಗಸೂಚಿಯಿಂದ ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಆಂಟಿ-ವೈರಲ್ ಫೆವಿಪಿರವಿರ್ ಅನ್ನು ಕೈಬಿಡಲಾಗಿದೆ. ಆದರೆ ಮಾರ್ಗಸೂಚಿಯಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಮತ್ತು ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳುತ್ತಿರುಬೇಕು ಎಂದು ಒತ್ತಿಹೇಳಿದೆ.

ಮಾರ್ಗಸೂಚಿಯಲ್ಲಿ ರೆಮಿಡೆಸಿವಿರ್ ಬಳಕೆಯನ್ನು ಉಲ್ಲೇಖಿಸಿವೆ. ರೋಗ ಪ್ರಾರಂಭವಾದ 10 ದಿನಗಳಲ್ಲಿ ನಂತರ ಹಾಗೂ ಪರಿಸ್ಥಿತಿ ಹದಗೆಟ್ಟಿದ್ದರೆ ಮಾತ್ರ ಇದನ್ನು ಬಳಸಲು ಸೂಚಿಸಲಾಗಿದೆ. ಅಲ್ಲದೆ ರೋಗನಿರೋಧಕ ಔಷಧವಾದ ಟೊಸಿಲಿಝಮಾಬ್ ಅನ್ನು ಬಳಸುವ ಮಾರ್ಗಸೂಚಿಗಳನ್ನು ಸಹ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದೆ.

SCROLL FOR NEXT