ಸಾಂಕೇತಿಕ ಚಿತ್ರ 
ದೇಶ

ಕೇಂದ್ರದಿಂದ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ಆಧಾರದಲ್ಲಿ ಗೋಧಿ ಖರೀದಿ!

ಈ ವರ್ಷ ಕೇಂದ್ರ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ದರದಲ್ಲಿ ಗೋಧಿಯನ್ನು ಖರೀದಿಸಿದೆ. ಸರ್ಕಾರ 418.47 ಲಕ್ಷ ಟನ್ ನಷ್ಟು ಗೋಧಿಯನ್ನು 82,648 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದೆ. 

ನವದೆಹಲಿ: ಈ ವರ್ಷ ಕೇಂದ್ರ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ದರದಲ್ಲಿ ಗೋಧಿಯನ್ನು ಖರೀದಿಸಿದೆ. ಸರ್ಕಾರ 418.47 ಲಕ್ಷ ಟನ್ ನಷ್ಟು ಗೋಧಿಯನ್ನು 82,648 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದೆ. 

ಪ್ರಸಕ್ತ ಮಾರ್ಕೆಟಿಂಗ್ ವರ್ಷದಲ್ಲಿ 418.47 ಲಕ್ಷ ಟನ್ ಗಳಷ್ಟು ಗೋಧಿಯನ್ನು ಖರೀದಿಸಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 82,648 ಕೋಟಿ ರೂಪಾಯಿಗಳಷ್ಟು ಖರ್ಚಾಗಿದೆ ಎಂದು ಹೇಳಿದೆ. ರೈತರ ಪ್ರತಿಭಟನೆಯ ನಡುವೆಯೂ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಗೋಧಿಯನ್ನು ಖರೀದಿಸಲಾಗಿದೆ. 

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಹಾಗೂ ಎಂಎಸ್ ಪಿಗೆ ಲಿಖಿತ ಖಾತ್ರಿಯನ್ನು ನೀಡುವುದಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಏಪ್ರಿಲ್-ಮಾರ್ಚ್ ತಿಂಗಳಲ್ಲಿ ರಾಬಿ ಮಾರ್ಕೆಟಿಂಗ್ ಸೀಸನ್ (ಆರ್ ಎಂಎಸ್) ನಡೆಯಲಿದೆ. ಆದರೆ ಬೃಹತ್ ಪ್ರಮಾಣದ ಸಂಗ್ರಹ ಜೂನ್ ವೇಳೆಗೆ ಮುಕ್ತಾಯಗೊಳ್ಳಲಿದೆ. 

ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರಗಳಲ್ಲಿ ಆರ್ ಎಂಎಸ್ 2021-22 ರ ಗೋಧಿ ದಾಸ್ತಾನು ಸರಾಗವಾಗಿ ನಡೆಯುತ್ತಿದೆ ಎಂದು ಅಧಿಕೃತ ಪ್ರಕಟಣೆಯ ಮೂಲಕ ತಿಳಿದುಬಂದಿದೆ. ಜೂ.8 ವರೆಗೂ ಸರ್ಕಾರ 418.47 ಟನ್ ಗಳಷ್ಟು ಗೋಧಿಯನ್ನು ಖರೀದಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸರ್ಕಾರ 373.22 ಲಕ್ಷ ಟನ್ ಗಳಷ್ಟು ಗೋಧಿಯನ್ನು ಖರೀದಿಸಿತ್ತು. ಇದರಿಂದಾಗಿ 46 ಲಕ್ಷ ರೈತರಿಗೆ ಲಾಭವಾಗಿದೆ ಎಂದು ಸರ್ಕಾರ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT