ಬೆಳಿಗ್ಗೆ 11.20 ರ ವೇಳೆಗೆ ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ದರೋಡೆ 
ದೇಶ

ಬಿಹಾರ: ಹೆಚ್ ಡಿಎಫ್ ಸಿ ಶಾಖೆಯಲ್ಲಿ 1.19 ಕೋಟಿ ರೂಪಾಯಿ ಹಗಲು ದರೋಡೆ! 

ಬಿಹಾರದ ವೈಶಾಲಿ ಜಿಲ್ಲೆಯ ಟೌನ್‍ ಪೊಲೀಸ್‍ ಠಾಣೆ ವ್ಯಾಪ್ತಿಯ ಎಚ್‍ ಡಿಎಫ್‍ ಸಿ ಬ್ಯಾಂಕ್‍ ನಲ್ಲಿ ಗುರುವಾರ ಹಗಲು ದರೋಡೆ ನಡೆದಿದ್ದು, 1.19 ಕೋಟಿ ರೂಪಾಯಿಗಳನ್ನು ದೋಚಲಾಗಿದೆ. ದ್ವಿಚಕ್ರವಾಹನದಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ.

ಪಾಟ್ನ: ಬಿಹಾರದ ವೈಶಾಲಿ ಜಿಲ್ಲೆಯ ಟೌನ್‍ ಪೊಲೀಸ್‍ ಠಾಣೆ ವ್ಯಾಪ್ತಿಯ ಎಚ್‍ ಡಿಎಫ್‍ ಸಿ ಬ್ಯಾಂಕ್‍ ನಲ್ಲಿ ಗುರುವಾರ ಹಗಲು ದರೋಡೆ ನಡೆದಿದ್ದು, 1.19 ಕೋಟಿ ರೂಪಾಯಿಗಳನ್ನು ದೋಚಲಾಗಿದೆ. ದ್ವಿಚಕ್ರವಾಹನದಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ.

ಎರಡು ಮೋಟರ್ ಸೈಕಲ್‍ ಗಳಲ್ಲಿ ಬಂದ ಐವರು ಕ್ರಿಮಿನಲ್‍ ಗಳು ಎಚ್‍ ಡಿಎಫ್‍ ಸಿ ಬ್ಯಾಂಕ್‍ ಗೆ ನುಗ್ಗಿ, ಕ್ಯಾಷಿಯರ್ ಗೆ ಪಿಸ್ತೂಲು ತೋರಿಸಿ ಒಂದು ಕೋಟಿ 19 ಲಕ್ಷ ರೂ ದೋಚಿದ್ದಾರೆ. ಬೆಳಿಗ್ಗೆ 11.20 ಈ ದರೋಡೆ ನಡೆದಿದ್ದು. ದೋಚಿದ ನಗದು ಹಣದೊಂದಿಗೆ ಪರಾರಿಯಾಗುವಲ್ಲಿ ಕ್ರಿಮಿನಲ್ ಗಳು ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೂಟಿಕೋರರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ಈ ಕರುತಿ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಕ್ರಿಮಿನಲ್ ಗಳ ಬಗ್ಗೆ ಸುಳಿವು ಪಡೆಯಲು ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!