ಕೋವಿಶೀಲ್ಡ್ 
ದೇಶ

ಕೋವಿಶೀಲ್ಡ್ ಡೋಸ್ ಗಳ ನಡುವಿನ ಅಂತರ ಹೆಚ್ಚಳಕ್ಕೆ ಇರಲಿಲ್ಲವೇ ಭಾರತೀಯ ವಿಜ್ಞಾನಿಗಳ ಬೆಂಬಲ?: ಸತ್ಯ ಬಹಿರಂಗ!

ಕೊರೋನಾ ಲಸಿಕೆ ಕೋವಿಶೀಲ್ಡ್ ನ 2 ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ವಿಜ್ಞಾನಿಗಳ ಬೆಂಬಲ ಇರಲಿಲ್ವಾ? ಹೀಗೊಂದು ಪ್ರಶ್ನೆ ಈಗ ರಾಯ್ಟರ್ಸ್ ವರದಿಯಿಂದ ಉದ್ಭವಿಸಿದೆ.

ನವದೆಹಲಿ: ಕೊರೋನಾ ಲಸಿಕೆ ಕೋವಿಶೀಲ್ಡ್ ನ 2 ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ವಿಜ್ಞಾನಿಗಳ ಬೆಂಬಲ ಇರಲಿಲ್ವಾ? ಹೀಗೊಂದು ಪ್ರಶ್ನೆ ಈಗ ರಾಯ್ಟರ್ಸ್ ವರದಿಯಿಂದ ಉದ್ಭವಿಸಿದೆ.

ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ಮೇ.13 ರಂದು ಏರಿಕೆ ಮಾಡಿರುವುದನ್ನು ಆರೋಗ್ಯ ಸಚಿವಾಲಯ ಘೋಷಿಸಿತ್ತು. ಆದರೆ ಈ ನಿರ್ಧಾರವನ್ನು ವೈಜ್ಞಾನಿಕ ಗುಂಪಿನ ಸಂಪೂರ್ಣ ಒಪ್ಪಿಗೇ ಇಲ್ಲದೇ ಕೈಗೊಳ್ಳಲಾಗಿರುವುದನ್ನು ಸಲಹಾ ಸಮಿತಿಯ ಮೂವರು ಸದಸ್ಯರು ಹೇಳಿರುವುದನ್ನು ರಾಯ್ಟರ್ಸ್ ಉಲ್ಲೇಖಿಸಿದೆ.

ಲಸಿಕೆ ಹಾಕುವ ವಿಷಯದ ಬಗ್ಗೆ ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಬ್ರಿಟನ್ ನ ರಿಯಲ್-ಲೈಫ್ ಎವಿಡೆನ್ಸ್ ಆಧಾರದಲ್ಲಿ ಲಸಿಕೆ ಡೋಸ್ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ಶಿಫಾರಸ್ಸು ಮಾಡಿತ್ತು ಎಂದು ಆರೋಗ್ಯ ಸಚಿವಾಲಯ ಹೇಳಿತ್ತು.

ಆದರೂ ಎನ್ ಟಿಎಜಿಐ ವಿಜ್ಞಾನಿಗಳು, ಸರ್ಕಾರದಿಂದ ವರ್ಗೀಕರಿಸಲಾದ 14 ಕೋರ್ ಸದಸ್ಯರ ಪೈಕಿ ಮೂವರು ಈ ರೀತಿಯ ಶಿಫಾರಸ್ಸು ಮಾಡುವುದಕ್ಕೆ ಸಾಕಷ್ಟು ಅಂಕಿ-ಅಂಶ, ಡಾಟಾ, ಮಾಹಿತಿಗಳಿಲ್ಲ ಎಂದು ಹೇಳಿದ್ದರು.

ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಮಾಜಿ ನಿರ್ದೇಶಕ ಎಂಡಿ ಗುಪ್ತೆ ಎನ್ ಟಿಎಜಿಐ ಡೋಸ್ ಗಳ ನಡುವಿನ ಅಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದ್ದ 8-12ಕ್ಕೆ ನಿಗದಿಪಡಿಸಲು ಒಪ್ಪಿಗೆ ನೀಡಿತ್ತು. ಆದರೆ ಈ ಗುಂಪಿಗೆ, 12 ವಾರಗಳ ಬಳಿಕವೂ ಎರಡನೇ ಡೋಸ್ ಲಸಿಕೆ ಅಂತರದ ಪರಿಣಾಮಗಳ ಬಗ್ಗೆ ಡಾಟಾ ಇರಲಿಲ್ಲ ಎಂದು ಹೇಳಿದ್ದಾರೆ. 

ಇದನ್ನೇ ಎನ್ ಟಿಜಿಐ ನಲ್ಲಿನ ಅವರ ಸಹೋದ್ಯೋಗಿ ಮ್ಯಾಥ್ಯೂ ವರ್ಗೀಸ್ ಹೇಳಿದ್ದು, ಗುಂಪಿನ ಶಿಫಾರಸ್ಸು ಇದ್ದದ್ದು 8-12 ವಾರಗಳಿಗೆ ಅಷ್ಟೇ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ