ಇಟಲಿ ನಾವಿಕರು 
ದೇಶ

ಇಟಲಿ ನಾವಿಕರಿಂದ ಭಾರತದ ಮೀನುಗಾರರ ಹತ್ಯೆ ಪ್ರಕರಣ: ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಕೇರಳ ಕರಾವಳಿ ತೀರದಲ್ಲಿ ಭಾರತದ ಮೀನುಗಾರರ ಹತ್ಯೆ ಮಾಡಿದ್ದ ಇಟಲಿ ನಾವಿಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ನವದೆಹಲಿ: ಕೇರಳ ಕರಾವಳಿ ತೀರದಲ್ಲಿ ಭಾರತದ ಮೀನುಗಾರರ ಹತ್ಯೆ ಮಾಡಿದ್ದ ಇಟಲಿ ನಾವಿಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಕೇರಳ ಕರಾವಳಿಯಲ್ಲಿ 2012ರ ಫೆಬ್ರವರಿ ತಿಂಗಳಲ್ಲಿ ತಮ್ಮ ನೌಕೆಯತ್ತ ಆಗಮಿಸಿದ್ದ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿದ್ದ ಇಟಲಿ ನಾವಿಕರು ಗುಂಡು ಹಾರಿಸಿದ್ದರು. ಈ ವೇಳೆ ಭಾರತದ ಇಬ್ಬರು ಮೀನುಗಾರರು ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಇಟಲಿಯ ಇಬ್ಬರು ನಾವಿಕರ ವಿರುದ್ಧ ಭಾರತದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದೀಗ ಇದೇ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 

ಪ್ರಕರಣಗಳನ್ನು ರದ್ದುಗೊಳಿಸಲು ಹಾಗೂ ಸಂತ್ರಸ್ತರ ಕುಟುಂಬದವರಿಗೆ 10 ಕೋಟಿ ರೂ ಪರಿಹಾರ ವಿತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿತ್ತು. ಅಂತಾರಾಷ್ಟ್ರೀಯ ನ್ಯಾಯಮಂಡಳಿ ತೀರ್ಪು ಮತ್ತು ಭಾರತ, ಇಟಲಿ ಹಾಗೂ ಕೇರಳ ಸರ್ಕಾರಗಳ ನಡುವೆ ನಡೆದ  ಒಪ್ಪಂದಗಳಿಗೆ ಅನುಗುಣವಾಗಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ರಜೆಕಾಲದ ನ್ಯಾಯಪೀಠ, ಆರೋಪಿಗಳಾದ ಮಸ್ಸಿಮಿಲಾನೊ ಲಾಟೊರೆ ಮತ್ತು ಸಾಲ್ವಟೋರ್ ಗಿರೋನ್ ವಿರುದ್ಧದ ಪ್ರಕರಣಗಳನ್ನು ಇಟಲಿಯಲ್ಲಿಯೇ ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಿತ್ತು. 

ನಾವಿಕರಿಂದ ಹತ್ಯೆಯಾದ ಮೀನುಗಾರರ ಕುಟುಂಬದವರಿಗೆ ಪಾವತಿಸಲು ಇಟಲಿ ಒಪ್ಪಿಕೊಂಡಿದ್ದ 10 ಕೋಟಿ ರೂ ಪರಿಹಾರವನ್ನು ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಕೋರ್ಟ್ ರಿಜಿಸ್ಟ್ರಿಯಲ್ಲಿ ಜಮೆ ಮಾಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಶುಕ್ರವಾರ ನ್ಯಾಯಪೀಠಕ್ಕೆ ತಿಳಿಸಿದ್ದರು. ಈ 10 ಕೋಟಿ ರೂ ಪರಿಹಾರದಲ್ಲಿ ತಲಾ ನಾಲ್ಕು ಕೋಟಿ ರೂ ಮೃತಪಟ್ಟ ಕುಟುಂಬದವರ ಸಂಬಂಧಿಕರಿಗೆ ಹಾಗೂ ಉಳಿದ ಎರಡು ಕೋಟಿ ರೂ ಆ ಮೀನುಗಾರರು ತೆರಳುತ್ತಿದ್ದ ದೋಣಿಯ ಮಾಲೀಕರಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್  ಸೂಚಿಸಿದೆ.

ಅದರಂತೆ ನಾವಿಕರು ಪರಿಹಾರ ಮೊತ್ತ ಪಾವತಿಸಿರುವ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಅಲ್ಲದೆ ಇಟಲಿ ಸರ್ಕಾರ ಈ ಪ್ರಕರಣದ ವಿಚಾರಣೆಯನ್ನು ಮುಂದುವರೆಸಬಹುದು ಎಂದು ಹೇಳಿದೆ

ಏನಿದು ಪ್ರಕರಣ?
2012ರ ಫೆಬ್ರವರಿ 15ರಂದು ಲಕ್ಷದ್ವೀಪದ ಕಡೆಯಿಂದ ಮೀನುಗಾರಿಕೆ ನಡೆಸಿ ಕೇರಳ ಮೀನುಗಾರರು ಮರಳುತ್ತಿದ್ದ ಸಂದರ್ಭದಲ್ಲಿ ಇಟಲಿಯ ಎನ್ರಿಕಾ ಲೆಕ್ಸಿ ಆಯಿಲ್ ಟ್ಯಾಂಕರ್‌ನಲ್ಲಿದ್ದ ಇಬ್ಬರು ನಾವಿಕರು ಗುಂಡು ಹಾರಿಸಿ ಇಬ್ಬರನ್ನು ಹತ್ಯೆ ಮಾಡಿದ್ದರು. ಘಟನೆ ನಡೆದ ಕೆಲವೇ ಸಮಯಗಳಲ್ಲಿ ಭಾರತದ ಕಾವಲು ಪಡೆ ಮಸ್ಸಿಮಿಲನೊ ಲಾಟೊರೆ ಮತ್ತು ಸಾಲ್ವಟೋರ್ ಗಿರೋನ್ ಅವರನ್ನು ಬಂಧಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT