ದೇಶ

ಟೂಲ್'ಕಿಟ್ ವಿವಾದ: ಮೇ 31 ರಂದು ದೆಹಲಿ ಪೊಲೀಸರಿಂದ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ವಿಚಾರಣೆ

Manjula VN

ನವದೆಹಲಿ: ಟೂಲ್ ಕಿಟ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಯವರನ್ನು ಬೆಂಗಳೂರಿನಲ್ಲಿ ವಿಚಾರಣೆಗೊಳಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಉನ್ನತ ಮಟ್ಟದ ದೆಹಲಿ ಪೊಲೀಸರ ವಿಶೇಷ ತಂಡ ಮೇ.31 ರಂದು ಬೆಂಗಳೂರಿಗೆ ಆಗಮಿಸಿ ಮನೀಶ್ ಮಹೇಶ್ವರಿಯವರನ್ನು ವಿಚಾರಣೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಕೋವಿಡ್-19 ಟೂಲ್ ಕಿಟ್ ಆರೋಪದ ತನಿಖೆಗೆ ಸಂಬಂಧಿಸಿದ ವಿಚಾರಣೆಗಾಗಿ ಟ್ವಿಟರ್ ಗೆ ವಿಶೇಷ ಘಟಕದಿಂದ ನೋಟಿಸ್ ಕಳುಹಿಸಲಾಗಿತ್ತು. ಬಿಜೆಪಿ ಮುಖಂಡ ಸಂಬೀತ್ ಪಾತ್ರ ತಿರುಚಿರುವ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡುವಂತೆ ಮೈಕ್ರೋಬ್ಲಾಗಿಂಗ್ ಸೈಟ್ ಗೆ ಕೇಳಲಾಗಿತ್ತು.

ಇದಲ್ಲದೆ, ಮೇ 24 ರಂದು ಲಾಡೋ ಸರಾಯ್, ದೆಹಲಿ ಮತ್ತು ಗುರಗಾಂವ್‌ನಲ್ಲಿರುವ ಟ್ವಿಟರ್ ಇಂಡಿಯಾ ಕಚೇರಿಗಳಿಗೆ ಪೊಲೀಸರು ದಾಳಿ ನಡೆಸಿದ್ದರು.

SCROLL FOR NEXT