ದೇಶ

ಸಂಸದೀಯ ಮಂಡಳಿ ಎದುರು ಟ್ವಿಟರ್ ಇಂಡಿಯಾ ಪ್ರತಿನಿಧಿಗಳು ಹಾಜರು

Srinivas Rao BV

ನವದೆಹಲಿ: ಟ್ವಿಟರ್ ಇಂಡಿಯಾದ ಪ್ರತಿನಿಧಿಗಳು ಸಂಸದೀಯ ಮಂಡಳಿ ಎದುರು ಹಾಜರಾಗಿದ್ದಾರೆ. 

ಶಶಿ ತರೂರ್ ನೇತೃತ್ವದ ಸಾಮಾಜಿಕ ಜಾಲತಾಣದ ದುರ್ಬಳಕೆಯ ತಡೆ ಸಮಿತಿಯ ಎದುರು ಟ್ವಿಟರ್ ನ ಪ್ರತಿನಿಧಿಗಳು ಸಾಮಾಜಿಕ ಜಾಲತಾಣದ ದುರ್ಬಳಕೆಯ ತಡೆ ವಿಷಯವಾಗಿ ಹಾಜರಾಗಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹೊಸ ಐಟಿ ನಿಯಮಗಳನ್ನು ತಕ್ಷಣವೇ ಪಾಲನೆ ಮಾಡುವಂತೆ ಟ್ವಿಟರ್ ಗೆ ನೊಟೀಸ್ ಜಾರಿಗೊಳಿಸಿತ್ತು.

ಪ್ರಜೆಗಳ ಹಕ್ಕುಗಳ ರಕ್ಷಣೆ ಹಾಗೂ ವೇದಿಕೆಯ ದುರ್ಬಳಕೆಯ ವಿಷಯದ ಬಗ್ಗೆ ಶಶಿ ತರೂರ್ ನೇತೃತ್ವದ ಸಮಿತಿ ಕಳೆದ ವಾರ ಟ್ವಿಟರ್ ಗೆ ಸಮನ್ಸ್ ಜಾರಿಗೊಳಿಸಿತ್ತು. ಟ್ವಿಟರ್ ಇಂಡಿಯಾ ಸಾರ್ವಜನಿಕ ನೀತಿ ಮ್ಯಾನೇಜರ್ ಶಗುಫ್ತಾ ಕಮ್ರಾನ್ ಹಾಗೂ ಕಾನೂನು ವಿಭಾಗದ ಆಯುಷಿ ಕಪೂರ್ ಸಮಿತಿ ಎದುರು ಹಾಜರಾಗಿದ್ದಾರೆ.

SCROLL FOR NEXT