ಮುಜಾಫರ್ ನಗರ(ಉತ್ತರಪ್ರದೇಶ): ವಿಲಕ್ಷಣ ಘಟನೆಯೊಂದರಲ್ಲಿ ತನ್ನ ಪತಿ ಇನ್ನೊಂದು ವಿವಾಹವಾಗಲು ಯೋಜಿಸಿದ್ದನೆಂಬ ಕಾರಣಕ್ಕೆ ಪತ್ನಿಯೇ ಆತನ ಮರ್ಮಾಂಗದ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಶಿಕಾರ್‌ಪುರ ಗ್ರಾಮದಲ್ಲಿ ಗುರುವಾರ ಸಂಜೆ ಭಜರಾ ಖುರ್ದ್ ಗ್ರಾಮದ ಮಸೀದಿಯಲ್ಲಿ ಇಮಾಮ್ ಆಗಿದ್ದ ಮೌಲ್ವಿ ವಕಿಲ್ ಅಹ್ಮದ್ ಅವರನ್ನ ಆತನ ಪತ್ನಿ ಹಜ್ರಾ ಗಂಭೀರ ಗಾಯಗೊಳಿಸಿದ್ದಾಳೆ.
ಮೌಲ್ವಿ ವಕಿಲ್ ಅಹ್ಮದ್ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಯೋಜಿಸುತ್ತಿದ್ದಾನೆ ಎಂದು ಹಜ್ರಾ ಪೊಲೀಸರಿಗೆ ತಿಳಿಸಿದ್ದು , ಅದರ ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅಲ್ಲದೆ ಶೀಘ್ರದಲ್ಲೇ ಹಿಂಸಾತ್ಮಕ ರೂಪ ಪಡೆದು ಮೌಲ್ವಿಯ ಹತ್ಯೆಗೆ ಕಾರಣವಾಗಿದೆ.
ಘಟನೆ ಸಂಬಂಧ ಭೋರಕ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ನಿತೇಂದ್ರ ಸಿಂಗ್ ಹೇಳಿದ್ದಾರೆ.