ಸಾಂದರ್ಭಿಕ ಚಿತ್ರ 
ದೇಶ

ದೆಹಲಿ: ಪೋಷಕರನ್ನು ವಿರೋಧಿಸಿ ಮದುವೆ; ಗುಂಡಿನ ದಾಳಿ; ಪತ್ನಿ ದೇಹ ಹೊಕ್ಕ 5 ಬುಲೆಟ್, ಪತಿ ಸಾವು!

ಅಪರಿಚಿತ ದುಷ್ಕರ್ಮಿಗಳು ಯುವ ದಂಪತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ದ್ವಾರಕಾದ ಅಂಬರ್ಹೈ ಗ್ರಾಮದಲ್ಲಿ ನಡೆದಿದೆ.

ನವದೆಹಲಿ: ಅಪರಿಚಿತ ದುಷ್ಕರ್ಮಿಗಳು ಯುವ ದಂಪತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ದ್ವಾರಕಾದ ಅಂಬರ್ಹೈ ಗ್ರಾಮದಲ್ಲಿ ನಡೆದಿದೆ.

ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ದಂಪತಿ ಮೇಲೆ 10 ಬಾರಿ ಗುಂಡು ಹಾರಿಸಿದ್ದು ಸ್ಥಳದಲ್ಲೇ 23 ವರ್ಷದ ವಿನಯ್ ದಹಿಯಾ ಮೃತಪಟ್ಟಿದ್ದು 19 ವರ್ಷದ ಕಿರಣ್ ದಹಿಯಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ದ್ವಾರಕಾದ ಸೆಕ್ಟರ್ 23 ರ ಪೊಲೀಸ್ ಠಾಣೆಗೆ ಅಂಬರ್ಹೈ ಗ್ರಾಮದಲ್ಲಿ ಗುಂಡಿನ ದಾಳಿ ನಡೆದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ದ್ವಾರಕಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆಯ ವೇಳೆ ಆರರಿಂದ ಏಳು ಜನರು ಬಂದು ದಂಪತಿಗೆ ಗುಂಡು ಹಾರಿಸಿರುವುದು ತಿಳಿದುಬಂದಿದೆ.

ಪತಿ ನಾಲ್ಕು ಗುಂಡೇಟಿನಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಐದು ಗುಂಡುಗಳು ಹೊಕ್ಕಿರುವ ಪತ್ನಿ ಐದು ಗುಂಡುಗಳನ್ನು ಗಂಭೀರ ಸ್ಥಿತಿಯಲ್ಲಿ ವೆಂಕಟೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪುರುಷನನ್ನು ವಿನಯ್ ದಹಿಯಾ (23) ಮತ್ತು ಮಹಿಳೆಯನ್ನು ಕಿರಣ್ ದಹಿಯಾ (19) ಎಂದು ಗುರುತಿಸಲಾಗಿದೆ.

ಇಬ್ಬರೂ ಹರಿಯಾಣದ ಸೋನಿಪತ್‌ನ ಗೋಪಾಲ್‌ಪುರ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ದಂಪತಿಗಳು ಒಂದು ವರ್ಷದ ಹಿಂದೆ ಓಡಿಹೋಗಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT