ನರೇಂದ್ರ ಮೋದಿ 
ದೇಶ

'ವಿಶ್ವ ಗುರು' ಭಾರತ ಮೋದಿಯಿಂದಾಗಿ 'ವಿಶ್ವ ಬಿಕಾರಿ'ಯಾಗುತ್ತಿದೆ: 

ಭಾರತವನ್ನು ವಿಶ್ವಗುರು ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವಿಶ್ವ ಬಿಕಾರಿಯನ್ನಾಗಿ ಮಾಡುತ್ತಿದೆ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ. 

ನವದೆಹಲಿ: ಭಾರತವನ್ನು ವಿಶ್ವಗುರು ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ ವ್ಯಂಗ್ಯವಾಡಿದೆ. 

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಪಂಜಾಬ್​​ ಕಾಂಗ್ರೆಸ್​ ಅಧ್ಯಕ್ಷ ಸುನೀಲ್​ ಜಂಕರ್​​, ಯುಎಸ್​ಡಿ 5 ಟ್ರಿಲಿಯನ್​ ಆರ್ಥಿಯತೆಯನ್ನು ಸೃಷ್ಟಿಸಿ, ವಿಶ್ವಕ್ಕೆ ಭಾರತ ಗುರುವಾಗಲಿದೆ ಎಂದು ಮೋದಿ ಹೇಳಿದ್ದರು. ಆದರೆ ಈಗ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳಿಂದ ಭಾರತ ಸಹಾಯ ಪಡೆಯುತ್ತಿದೆ. ಭಾರತವನ್ನು ಪ್ರಧಾನಿ ಮೋದಿ ವಿಶ್ವ ಬಿಕಾರಿಯನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಕೊರೊನಾ 2ನೇ ಅಲೆ ವೇಳೆ ಮೋದಿ ಅವರ ನಿರ್ವಹಣೆ ಕಳಪೆಯಾಗಿತ್ತು. ಹೇಗೆ ನಿರ್ವಹಣೆ ಮಾಡಬಾರದು ಎಂಬುವುದಕ್ಕೆ ಮೋದಿ ಆಡಳಿತ ಮಾದರಿಯಾಗಿದೆ. 5 ಟ್ರಿಲಿಯನ್​ ಆರ್ಥಿಕತೆ ಮೂಲಕ ಭಾರತ ವಿಶ್ವಗುರು ಎನಿಸಿಕೊಳ್ಳುತ್ತೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಈಗ ನಿತ್ಯ ಆಕ್ಸಿಜನ್​ ಹೊತ್ತ ವಿಮಾನಗಳು ವಿದೇಶದಿಂದ ಬರುತ್ತಿವೆ. ಪ್ರಪಂಚದ ಎದುರು ಭಾರತ ಆಕ್ಸಿಜನ್​ಗಾಗಿ ಕೈಚಾಚಿ ಕೂತಿದೆ. ಭಾರತವನ್ನು ಪ್ರಧಾನಿ ಮೋದಿ ವಿಶ್ವಬಿಕಾರಿಯನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT