ದೇಶ

ಟೋಕಿಯೋ ಒಲಂಪಿಕ್ಸ್: ಎಲ್ಲಾ ಕ್ರೀಡಾಪಟುಗಳಿಗೆ ಮನ್ ಕಿ ಬಾತ್ ನಲ್ಲಿ ಶುಭಾಶಯ ಕೋರಿದ ಪ್ರಧಾನಿ ಮೋದಿ

Manjula VN

ನವದೆಹಲಿ: 78ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಟೋಕಿಯೋ ಒಲಂಪಿಕ್ಸ್ ತಯಾರಿ ಕುರಿತು ಮಾತನಾಡಿ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯ ಕೋರಿದ್ದಾರೆ. 

ಇದೇ ವೇಳೆ ಒಲಂಪಿಕ್ಸ್ ಬಗ್ಗೆ ಸಮಗ್ರ ಮಾಹಿತಿ ಇರುವ ವೆಬ್'ಸೈಟ್'ನ್ನು ಆರಂಭಿಸಿರುವುದಾಗಿ ಮಾಹಿತಿ ನೀಡಿದ ಅವರು, ರೋಡ್ ಟು ಟೋಕಿಯೋ ಕ್ವಿಜ್ ಆರಂಭಿಸಿರುವುದಾಗಿ ತಿಳಿಸಿದ್ದಾರೆ. 

ಕ್ರೀಡಾ ಸ್ಪೂರ್ತಿಯಿಂದ ಉತ್ತಮ ಆಟಗಾರನಾಗಬಹುದು. ಹಳ್ಳಿಗಳಿಂದ ಅನೇಕ ಆಟಗಾರರು ಒಲಂಪಿಕ್'ಗೆ ಬರುತ್ತಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರವೀಣ್ ಜಾಧವ್ ಅತ್ಯುತ್ತಮ ಬಿಲ್ಲುಗಾರ. ಅವರ ಪೋಷಕರು ಕಾರ್ಮಿಕಾರಿ ಕೆಲಸ ಮಾಡುತ್ತಾರೆ. ಈಗ ಜಾಧವ್ ಟೋಕಿಯೋದಲ್ಲಿ ತಮ್ಮ ಮೊದಲ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದ್ದಾರೆ. 

ಟೋಕಿಯೋಗೆ ಹೋಗುವ ಪ್ರತಿಯೊಬ್ಬ ಆಟಗಾರನೂ ಕೂಡ ಸ್ವಂತ ಹೋರಾಟ ಮತ್ತು ಅನೇಕ ವರ್ಷಗಳ ಶ್ರಮವನ್ನು ಹೊಂದಿದ್ದಾರೆ. ಅವರು ತಮಗಾಗಿ ಮಾತ್ರವಲ್ಲದೇ ದೇಶಕ್ಕಾಗಿ ಹೋಗುತ್ತಿದ್ದಾರೆ. ಅಂತಹ ಹಲವಾರು ಹೆಸರುಗಳಿವೆ. ಆದರೆ, ಮನ್ ಕಿ ಬಾತ್ ನಲ್ಲಿ ಇಂದು ನಾನು ಕೆಲವರನ್ನು ಮಾತ್ರ ಉಲ್ಲೇಖಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. 

ಮಿಲ್ಕಾ ಸಿಂಗ್ ನಿಧನಕ್ಕೆ ಸಂತಾಪ
ಕೊರೋನಾ ಸಂಬಂಧಿತ ಸಮಸ್ಯೆಯಿಂದಾಗಿ ಇಹಲೋಕ ತ್ಯಜಿಸಿದ ಅಥ್ಲೆಟಿಕ್ ದಿಗ್ಗಜ ಹಾಗೂ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಪಡೆದಿರುವ ಮಿಲ್ಖಾ ಸಿಂಗ್ ಅವರಿಗೆ ಇದೇ ವೇಳೆ ಪ್ರಧಾನಿ ಮೋದಿಯವರು ಗೌರವ ಸಲ್ಲಿಸಿದರು. 

ಒಲಿಂಪಿಕ್ಸ್ ಬಗ್ಗೆ ಮಾತನಾಡುವಾಗ ನಾವೇಕೆ ಮಿಲ್ಖಾ ಸಿಂಗ್ ಅವರನ್ನು ನೆನಪಿಸಿಕೊಳ್ಳುವುದಿಲ್ಲ? ಅವರು ಆಸ್ಪತ್ರೆಗೆ ದಾಖಲಾದಾಗ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಟೋಕಿಯೋ ಒಲಿಂಪಿಕ್ಸ್'ಗೆ ಹೋಗುವ ಕ್ರೀಡಾಪಟುಗಳನ್ನು ಪ್ರೇರೇಪಿಸುವಂತೆ ನಾನು ಅವರಲ್ಲಿ ಮನವಿ ಮಾಡಿಕೊಂಡಿದ್ದೆ ಎಂದು ತಿಳಿಸಿದ್ದಾರೆ.

SCROLL FOR NEXT