ಸೇಬು (ಸಾಂಕೇತಿಕ ಚಿತ್ರ) 
ದೇಶ

ಸೇಬನ್ನು ಮಂಗಗಳಿಂದ ರಕ್ಷಿಸಿ, ಇಲ್ಲವೇ ಕ್ರಮ ಎದುರಿಸಿ: ವೈರಲ್ ಆಯ್ತು ಉತ್ತರಾಖಂಡ್ ಪೊಲೀಸರ ಮೆಮೊ!

ಸೇಬನ್ನು ಮಂಗಗಳಿಂದ ರಕ್ಷಿಸಿ ಇಲ್ಲವೇ ಕ್ರಮ ಎದುರಿಸಿ ಎಂದು ಕಿರಿಯ ಸಿಬ್ಬಂದಿಗಳಿಗೆ ಉತ್ತರಾಖಂಡ್ ಪೊಲೀಸ್ ಅಧಿಕಾರಿ ಕಳಿಸಿದ ಮೆಮೋ ವೈರಲ್ ಆಗತೊಡಗಿದೆ. 

ಡೆಹ್ರಾಡೂನ್: ಸೇಬನ್ನು ಮಂಗಗಳಿಂದ ರಕ್ಷಿಸಿ ಇಲ್ಲವೇ ಕ್ರಮ ಎದುರಿಸಿ ಎಂದು ಕಿರಿಯ ಸಿಬ್ಬಂದಿಗಳಿಗೆ ಉತ್ತರಾಖಂಡ್ ಪೊಲೀಸ್ ಅಧಿಕಾರಿ ಕಳಿಸಿದ ಮೆಮೋ ವೈರಲ್ ಆಗತೊಡಗಿದೆ. 

ಇಲಾಖೆಯ ಆಂತರಿಕ ಮೆಮೋ ಇದಾಗಿದ್ದು ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ.ನೀರು ಗರ್ಗ್, 2005 ಬ್ಯಾಚ್ ನ ಐಪಿಎಸ್ ಅಧಿಕಾರಿ ಹಾಗೂ ಗರ್ವಾಲ್ ರೇಂಜ್ ನ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಜೂ.26 ರಂದು, 2021 ಹೊರಡಿಸಿರುವ ಆದೇಶದಲ್ಲಿ "ಡಿಐಜಿ ಕಚೇರಿಗೆ ಈ ರೀತಿಯಾಗಿ ಮೆಮೋ ಕಳಿಸಿರುವುದರ ಬಗ್ಗೆ ಯಾವುದೇ ಅರಿವಿಲ್ಲ.  ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಿ" ಎಂದು ಹೇಳಿದೆ. 

ಪೌರಿ ಜಿಲ್ಲೆಯ ಹಿರಿಯ ಎಸ್ ಪಿಯೊಬ್ಬರು ತನಿಖೆಯನ್ನು ನಡೆಸಲಿದ್ದಾರೆ. "ಡಿಐಜಿ ಅವರ ಅಧಿಕೃತ ನಿವಾಸದಲ್ಲಿ ಸೇಬಿನ ಮರವೊಂದಿದೆ. ಅಧಿಕೃತ ನಿವಾಸದಲ್ಲಿರುವ ಭದ್ರತಾ ಸಿಬ್ಬಂದಿಗಳು, ಸೇಬಿನ ಮರವನ್ನು ರಕ್ಷಿಸುವುದರಲ್ಲಿ ಯಾವುದೇ ಲೋಪವೂ ಉಂಟಾಗಬಾರದು, ಒಂದು ವೇಳೆ ಉಂಟಾದಲ್ಲಿ ಗಾರ್ಡ್ ಗಳ ವಿರುದ್ಧ ಕ್ರಮ ಜರುಗಿಸಬೇಕೆಂದು" ಮೆಮೋದಲ್ಲಿ ಹೇಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!