ದೇಶ

ಜೂನ್ 2022 ರವರೆಗೆ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವಧಿ ವಿಸ್ತರಣೆ

Nagaraja AB

ನವದೆಹಲಿ: ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಅಮಿತಾಭ್ ಕಾಂತ್ ಅವರ ಅಧಿಕಾರವಧಿಯನ್ನು ಕೇಂದ್ರ ಸರ್ಕಾರ ಮತ್ತೆ ಒಂದು ವರ್ಷ ವಿಸ್ತರಿಸಿದೆ.

ಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರ ಜೂನ್ 2022ರವರೆಗೂ  ಅಮಿತಾಭ್ ಕಾಂತ್ ಅವರ ಅಧಿಕಾರವಧಿ ವಿಸ್ತರಣೆಯಾಗಿದೆ. 65 ವರ್ಷದ ನಾಗರಿಕ ಸೇವಾ ಅಧಿಕಾರಿಯ ಅಧಿಕಾರ ಮೂರನೇ ಬಾರಿಗೆ ವಿಸ್ತರಣೆಯಾಗಿದೆ.

2021 ರ ಜೂನ್ 30 ರ ನಂತರ ಒಂದು ವರ್ಷ ಅವಧಿ ವಿಸ್ತರಿಸಲು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ.  ಅಂದರೆ 2022 ರ ಜೂನ್ 30 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಅವರ ಅಧಿಕಾರವಧಿ ಇರಲಿದೆ ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ.

ನಿಗದಿತ ಎರಡು ವರ್ಷಗಳ ಅವಧಿಗೆ ಅವರನ್ನು ಫೆಬ್ರವರಿ 17, 2016 ರಂದು ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಫಾರ್ ಟ್ರಾನ್ಸ್‌ ಫಾರ್ಮಿಂಗ್ ಇಂಡಿಯಾ (ನೀತಿ ಆಯೋಗ) ಸಿಇಒ ಆಗಿ ನೇಮಿಸಲಾಗಿತ್ತು.  ನಂತರ ಕಾಂತ್ ಅವರಿಗೆ 2019 ರ ಜೂನ್ 30 ರವರೆಗೆ ವಿಸ್ತರಣೆ ನೀಡಲಾಯಿತು. ಮತ್ತೆ ಎರಡು ವರ್ಷಗಳ ಅವಧಿಗೆ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿತ್ತು.

SCROLL FOR NEXT