ಶಶಿಕಲಾ 
ದೇಶ

ಶಶಿಕಲಾ ಬಹುದಿನಗಳಿಂದ ಎಐಎಡಿಎಂಕೆಯೊಂದಿಗೆ ಇಲ್ಲ: ಆಡಿಯೋ ಟೇಪ್ ಬಗ್ಗೆ ಪಳನಿಸ್ವಾಮಿ ಪ್ರತಿಕ್ರಿಯೆ

ಎಐಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ ಶಶಿಕಲಾ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿರುವ ಮಾತುಕತೆ 1.5 ಕೋಟಿ ಕಾರ್ಯಕರ್ತರನ್ನು  ಹೊಂದಿರುವ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಎಐಎಡಿಎಂಕೆ ಸಹ ಸಂಯೋಜಕ ಕೆ ಪಳನಿಸ್ವಾಮಿ ಬುಧವಾರ ಹೇಳಿದ್ದಾರೆ.

ಚೆನ್ನೈ: ಎಐಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ ಶಶಿಕಲಾ ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿರುವ ಮಾತುಕತೆ 1.5 ಕೋಟಿ ಕಾರ್ಯಕರ್ತರನ್ನು ಆಧರಿಸಿರುವ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಎಐಎಡಿಎಂಕೆ ಸಹ ಸಂಯೋಜಕ ಕೆ ಪಳನಿಸ್ವಾಮಿ ಬುಧವಾರ ಹೇಳಿದ್ದಾರೆ. 2017ರಲ್ಲಿ ಉಚ್ಚಾಟನೆಯಾದಾಗಿನಿಂದಲೂ ಅವರು ಪಕ್ಷದೊಂದಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

ಸೇಲಂನ ಓಮಲೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ, ಶಶಿಕಲಾ ಎಐಎಡಿಎಂಕೆನೊಂದಿಗೆ ಇಲ್ಲ, ಪಕ್ಷದೊಂದಿಗೆ ಸಂಪರ್ಕದಲ್ಲಿಯೂ ಇಲ್ಲ, ಕೇವಲ 10 ಜನರಲ್ಲ, ಸಾವಿರ ಜನರೊಂದಿಗೆ ಆಕೆ ಸಂವಾದ ನಡೆಸಿದರೂ 1.5 ಕೋಟಿ ಕಾರ್ಯಕರ್ತರ ಬಲವಿರುವ ಎಐಎಡಿಎಂಕೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

ಲಸಿಕೆ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದರೂ ಇದನ್ನೇ ಮಾಧ್ಯಮಗಳು ದೊಡ್ಡ ಸಮಸ್ಯೆಯಾಗಿ ಬಿಂಬಿಸುತ್ತಿವೆ ಎಂದು ಹೇಳಿದ ಪಳನಿಸ್ವಾಮಿ, ಪೆಟ್ರೋಲ್  ಡೀಸೆಲ್ ಬೆಲೆ ಇಳಿಕೆ ಸೇರಿದಂತೆ 505 ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಡಿಎಂಕೆ, ಯಾವುದನ್ನು ಕೂಡಾ ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel