ದೇಶ

ಜನರಿಂದ ಸಹಾನುಭೂತಿ ಪಡೆಯಲು ಮಮತಾ ಪ್ರಯತ್ನ: ಅಧೀರ್ ರಂಜನ್ ಚೌಧರಿ

Nagaraja AB

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಮೇಲೆ ಕೊಲೆ ಯತ್ನ, ಪಿತೂರಿ, ಹಲ್ಲೆಯಂತಹ ಘಟನೆಗಳು ನಡೆದಿವೆ ಎಂದು ಹೇಳುವ ಮೂಲಕ ಜನರಿಂದ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.

ತನ್ನೊಂದಿಗೆ ಪೊಲೀಸರು ಇರಲಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುವುದು ಹಾಸ್ಯಾಸ್ಪದವಾಗಿದೆ. ಇದು  ನೆಪಗಳೊಂದಿಗೆ ಚುನಾವಣೆ ಗೆಲ್ಲುವ ತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಪಿತೂರಿ ನಡೆದಿದ್ದರೆ ಸಿಬಿಐ, ಎನ್ ಐಎ, ಸಿಐಡಿಗೆ ಕರೆ ಮಾಡಬೇಕಿತ್ತು ಅಥವಾ ಎಸ್ ಐಟಿ ರಚಿಸಬೇಕಿತ್ತು. ಮಮತಾ ಬ್ಯಾನರ್ಜಿ ಏಕೆ ಇದನ್ನು ಮಾಡಲಿಲ್ಲ? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಚೌಧರಿ, ನೆಪಗಳೊಂದಿಗೆ ಸಾರ್ವಜನಿಕರಿಂದ ಸಹಾನುಭೂತಿಯನ್ನು ಪಡೆಯಲು ಬಯಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

SCROLL FOR NEXT