ದೇಶ

ನಂದಿಗ್ರಾಮದ ಚುನಾವಣೆ ಫಲಿತಾಂಶ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುತ್ತೇನೆ: ಮಮತಾ ಬ್ಯಾನರ್ಜಿ

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೆದ್ದಿದ್ದರೂ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. 

ತಮ್ಮ ಸೋಲಿನ ಕುರಿತು ಇದೇ ಮೊದಲ ಬಾರಿಗೆ ಹೇಳಿಕೆ ನೀಡಿರುವ ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿರುವ ರಿಟರ್ನಿಂಗ್ ಅಧಿಕಾರಿ ಮತಗಳ ಮರು ಎಣಿಕೆಗೆ ಅವಕಾಶ ನೀಡಿದಲ್ಲಿ ನನ್ನ ಜೀವಕ್ಕೇ ಅಪಾಯವಿದೆ ಎಂದು ಒಬ್ಬರಿಗೆ ಸಂದೇಶ ಕಳಿಸಿದ್ದರು. ಅಷ್ಟೇ ಅಲ್ಲದೇ ನಾಲ್ಕು ಗಂಟೆಗಳ ಕಾಲ ಸರ್ವರ್ ಡೌನ್ ಆಗಿತ್ತು ಎಂದು ತಮ್ಮ ಸೋಲಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

"ರಾಜ್ಯಪಾಲರೂ ನನ್ನನ್ನು ಗೆಲುವಿಗಾಗಿ ಅಭಿನಂದಿಸಿದ್ದರು. ಆದರೆ ಏಕಾ ಏಕಿ ಎಲ್ಲವೂ ಬದಲಾಗಿಹೋಯಿತು, ರಿಟರ್ನಿಂಗ್ ಅಧಿಕಾರಿ ಜೀವ ಬೆದರಿಕೆಗೆ ಹೆದರಿ ಮರು ಮತ ಎಣಿಕೆಗೆ ಆದೇಶ ನೀಡಲಿಲ್ಲ" ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

"ನಂದಿಗ್ರಾಮ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ ಬಳಿಕ ಅದನ್ನು ಆಯೋಗ ಹೇಗೆ ಬದಲಾವಣೆ ಮಾಡಲು ಸಾಧ್ಯ? ಇದನ್ನು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ, ಕಾಣುವುದಕ್ಕಿಂತಲೂ ಬೇರೇನೋ ನಡೆದಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಂದಿಗ್ರಾಮ ಚುನಾವಣೆ ಫಲಿತಾಂಶವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಇದೇ ವೇಳೆ ಪತ್ರಕರ್ತರನ್ನು ಕೋವಿಡ್-19 ಯೋಧರು ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಮಮತಾ ಸೋಲಿನ ಬೆನ್ನಲ್ಲೇ ಬಿಜೆಪಿ ಕಚೇರಿ ಬಳಿ ನಡೆದ ದಾಂಧಲೆ ಬೆನ್ನಲ್ಲೇ ಬೆಂಬಲಿಗರಿಗೆ ಶಾಂತಿಯಿಂದ ಇರುವಂತೆ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

SCROLL FOR NEXT