ದೇಶ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 'ದುರಹಂಕಾರ'ವೂ ಕಾರಣ: ಶಿವಸೇನೆ

Lingaraj Badiger

ಮುಂಬೈ: ಇತ್ತೀಚಿಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿಗೆ ಬಿಜೆಪಿಯ ದುರಹಂಕಾರವೂ ಒಂದು ಕಾರಣ ಎಂದು ಶಿವಸೇನೆ ಮಂಗಳವಾರ ಹೇಳಿದೆ.

ಸೇನಾ ಮುಖವಾಣಿ 'ಸಾಮ್ನಾ' ಸಂಪಾದಕೀಯವು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ಹೊರಗುಳಿಯಲು ಬಿಜೆಪಿಯ "ಅಸಹಿಷ್ಣುತೆ" ಕಾರಣವಾಗಿದೆ ಎಂದು ಹೇಳಿದೆ.

ಕೇಸರಿ ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚಿರಿಕೆಯಿಂದ ಮಾತನಾಡಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಅವರಿಗೆ ಹೇಳಿದೆ ಬೆನ್ನಲ್ಲೇ ಶಿವಸೇನೆ ಈ ರೀತಿ ತಿರುಗೇಟು ನೀಡಿದೆ.

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಭುಜಬಲ್ ಅವರು ಬಿಜೆಪಿಯ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡಿದ್ದರು, ಅಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕೇಸರಿ ಪಕ್ಷವನ್ನು ಸೋಲಿಸಿದೆ ಎಂದಿದ್ದರು.

ಭುಜಬಲ್ ಅವರು ಬ್ಯಾನರ್ಜಿಯ ಅದ್ಭುತ ವಿಜಯವನ್ನು ಶ್ಲಾಘಿಸಿದ್ದಾರೆ ಮತ್ತು ಅದರಲ್ಲಿ ತಪ್ಪೇನು ಎಂದು ಶಿವಸೇನೆ ಪ್ರಶ್ನಿಸಿದೆ. 

"ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಬಿಜೆಪಿಯ ದುರಹಂಕಾರವೂ ಒಂದು ಕಾರಣ" ಎಂದು ಮರಾಠಿ ದಿನಪತ್ರಿಕೆ ಹೇಳಿದೆ.

SCROLL FOR NEXT