ದೇಶ

ತಮಿಳುನಾಡಿನ ಪತ್ರಕರ್ತರು ಕೋವಿಡ್ ಹೋರಾಟದ ಮುಂಚೂಣಿ ಕಾರ್ಯಕರ್ತರು: ಎಂ.ಕೆ. ಸ್ಟಾಲಿನ್ ಘೋಷಣೆ

Raghavendra Adiga

ಚೆನ್ನೈ: ಮಾಧ್ಯಮ ವೃತ್ತಿಪರರನ್ನು, ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಘೋಷಿಸಿದ್ದಾರೆ. ಕೊರೋನಾವೈರಸ್ ವಿರುದ್ಧ ಆದ್ಯತೆಯ ವ್ಯಾಕ್ಸಿನೇಷನ್ ಸೇರಿದಂತೆ ಎಲ್ಲಾ ಸೌಲಭ್ಯಗಳಿಗೆ ಪತ್ರಕರ್ತರು ಈಗ ಅರ್ಹರಾಗಿರುತ್ತಾರೆ.

ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲ ಪತ್ರಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ.ಅವರ ಕೆಲಸವನ್ನು ತಮಿಳುನಾಡಿನಲ್ಲಿ ಮುಂಚೂಣಿ ಕಾರ್ಯಕರ್ತರ ಸೇವೆ ಎಂದು ಪರಿಗಣಿಸಲಾಗುವುದು ಎಂದು ಸ್ಟಾಲಿನ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

"ಮಳೆ, ಬಿಸಿಲು, ಪ್ರವಾಹದಿಂದಾಗಿ ತಮ್ಮ ಜೀವದ ಅಪಾಯದಲ್ಲಿದ್ದರೂ ಪತ್ರಿಕೆಗಳು, ದೃಶ್ಯ ಹಾಗೂ ಶ್ರವ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲ ಮಾಧ್ಯಮ ವೃತ್ತಿಪರರನ್ನು ತಮಿಳುನಾಡಿನಲ್ಲಿ ಮುಂಚೂಣಿ ಕಾರ್ಯಕರ್ತರುಎಂದು ಪರಿಗಣಿಸಲಾಗುತ್ತದೆ" ಎಂದು ಸ್ಟಾಲಿನ್ ತಮಿಳು ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ "ಆದ್ಯತೆಯ ನೌಕರರ ಹಕ್ಕುಗಳಿಗೆ ಅನುಗುಣವಾಗಿ ಅವರಿಗೆ ಸವಲತ್ತುಗಳನ್ನು ನೀಡಲಾಗುವುದು" ಎಂದು ಅವರು ಹೇಳಿದರು.

ಈ ಹಿಂದೆ, ಬಿಹಾರ, ಪಂಜಾಬ್, ಮತ್ತು ಮಧ್ಯಪ್ರದೇಶ, ಒಡಿಶಾ ಸೇರಿದಂತೆ ಅನೇಕ ರಾಜ್ಯಗಳು ಪತ್ರಕರ್ತರನ್ನು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯ ಕಾರ್ಯಕರ್ತರು  ಎಂದು ಘೀಷಿಸಿದೆ.

ಭಾರತದ ಒಟ್ಟು ಕೋವಿಡ್ ಪ್ರಕರಣಗಳು 2 ಕೋಟಿ ಗಡಿ ದಾಟಿದ್ದು, ಕೇವಲ 15 ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಸೇರ್ಪಡೆಯಾಗಿದೆ. ಒಂದೇ ದಿನದಲ್ಲಿ 3,57,229 ಹೊಸ ಸೋಂಕು ಪ್ರಕರಣ ವರದಿಯಾಗಿರುವ ದೇಶದಲ್ಲಿ ಒಟ್ಟು ಕೊರೋನಾವೈರಸ್ಪ್ರಕರಣಗಳು 2,02,82,833 ಕ್ಕೆ ಏರಿಕೆಯಾಗಿದ್ದು, 3,449 ಮಂದಿ ಒಂದೇ ದಿನ ಸಾವನ್ನಪ್ಪುವುದರೊಡನೆ ಸಾವಿನ ಸಂಖ್ಯೆ 2,22,408 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ

SCROLL FOR NEXT