ದೇಶ

ದೆಹಲಿಗೆ 700 ಎಂಟಿ ಆಕ್ಸಿಜನ್ ಪೂರೈಕೆ ಮುಂದುವರೆಸಲು ಮನೀಷ್ ಸಿಸೋಡಿಯ ಕೇಂದ್ರಕ್ಕೆ ಮನವಿ 

Srinivas Rao BV

ನವದೆಹಲಿ: ದೆಹಲಿಗೆ 700 ಎಂಟಿ ಆಕ್ಸಿಜನ್ ನ್ನು ಪೂರೈಕೆ ಮಾಡುವುದನ್ನು ಮುಂದುವರೆಸಲು ಕೇಂದ್ರ ಸರ್ಕಾರಕ್ಕೆ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಮನವಿ ಮಾಡಿದ್ದಾರೆ. 

ಸುಪ್ರೀಂ ಕೋರ್ಟ್ ನ ನಿರ್ದೇಶನದ ಹೊರತಾಗಿಯೂ ದೆಹಲಿಗೆ 700 ಎಂಟಿ ಆಕ್ಸಿಜನ್ ಗಿಂತಲೂ ಕಡಿಮೆ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ಮನೀಷ್ ಸಿಸೋಡಿಯಾ ಹೇಳಿದ್ದು, ಜೀವರಕ್ಷಕ ಅನಿಲವನ್ನು ರಾಜ್ಯಗಳ ನಡುವೆ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವಂತೆ ಮನವಿ ಮಾಡಿದ್ದಾರೆ. 

ದೆಹಲಿಗೆ ಈಗ 700 ಮೆಟ್ರಿಕ್ ಟನ್ ಗಳಷ್ಟು ಆಕ್ಸಿಜನ್ ಲಭ್ಯವಿದೆ. ಮೇ.05 ರಂದು ದೆಹಲಿಗೆ 730 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ದೊರೆತಿದೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಮನೀಷ್ ಸಿಸೋಡಿಯಾ ಹೇಳಿದ್ದಾರೆ. 

ಆದರೆ ಮೇ.06 ರಂದು ಆಕ್ಸಿಜನ್ ಪೂರೈಕೆ 577 ಮೆಟ್ರಿಕ್ ಟನ್ ಗೆ ಇಳಿಕೆಯಾದರೆ ಮೇ.07 ರಂದು ಅದು 487 ಟನ್ ಗೆ ಇಳಿಕೆಯಾಗಿದೆ. 700 ಎಂಟಿಗಿಂತಲೂ ಕಡಿಮೆ ಪ್ರಮಾಣದ ಆಕ್ಸಿಜನ್ ನಿಂದ ಆಸ್ಪತ್ರೆಗಳನ್ನು ನಿರ್ವಹಣೆ ಮಾಡುವುದು ಕಷ್ಟಸಾಧ್ಯ ಎಂದು ಸಿಸೋಡಿಯಾ ಹೇಳಿದ್ದಾರೆ. 

SCROLL FOR NEXT