ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಆಕ್ಸಿಜನ್ ಎಕ್ಸ್ ಪ್ರೆಸ್: ದೇಶಾದ್ಯಂತ ಸುಮಾರು 4,200 ಮೆಟ್ರಿಕ್ ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಕೆ

ಏಪ್ರಿಲ್ 19ರಿಂದ ವಿವಿಧ ರಾಜ್ಯಗಳಿಗೆ 268 ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ ಸುಮಾರು 4,200 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಸಲಾಗಿದೆ ಎಂದು ಭಾರತೀಯ ರೈಲ್ವೆ ಭಾನುವಾರ ತಿಳಿಸಿದೆ.

ಆಕ್ಸಿಜನ್ ಟ್ಯಾಂಕರ್
Nagaraja AB
Updated On : 9 May 2021, 6:41 pm

ನವದೆಹಲಿ: ಏಪ್ರಿಲ್ 19ರಿಂದ ವಿವಿಧ ರಾಜ್ಯಗಳಿಗೆ 268 ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ ಸುಮಾರು 4,200 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಸಲಾಗಿದೆ ಎಂದು ಭಾರತೀಯ ರೈಲ್ವೆ ಭಾನುವಾರ ತಿಳಿಸಿದೆ. ಈವರೆಗೂ 68 'ಆಕ್ಸಿಜನ್ ಎಕ್ಸ್ ಪ್ರೆಸ್' ರೈಲುಗಳು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿರುವುದಾಗಿ ರೈಲ್ವೆ ಹೇಳಿದೆ.

ಈವರೆಗೆ ಮಹಾರಾಷ್ಟ್ರದಲ್ಲಿ 293, ಉತ್ತರ ಪ್ರದೇಶದಲ್ಲಿ 1230, ಮಧ್ಯಪ್ರದೇಶಕ್ಕೆ 271, ಹರಿಯಾಣಕ್ಕೆ 555, ತೆಲಂಗಾಣಕ್ಕೆ 123, ರಾಜಸ್ಥಾನಕ್ಕೆ 40 ಮತ್ತು ದೆಹಲಿಗೆ 1679 ಟನ್ ಧ್ರುವೀಕೃತ ಆಮ್ಲಜನಕವನ್ನು ರವಾನಿಸಲಾಗಿದೆ.ಭಾನುವಾರ ಕಾನ್ಪುರದಲ್ಲಿ 80 ಟನ್ ಆಕ್ಸಿಜನ್ ರವಾನಿಸಲಾಗಿದೆ. ಹೆಚ್ಚಿನ ಲೋಡೆಡ್ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ತಡರಾತ್ರಿ ಪ್ರಯಾಣವನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಮಾಹಿತಿ ನೀಡಿದೆ.

ಮಾರಕ ಕೋವಿಡ್ -19 ಎರಡನೇ ಅಲೆ ನಡುವೆ ದೇಶದಲ್ಲಿ ಜೀವ ರಕ್ಷಕ ಆಮ್ಲಜನಕದ ತೀವ್ರ ಕೊರತೆ ಎದುರಾಗುತ್ತಿದ್ದಂತೆ ಕಳೆದ ತಿಂಗಳಿನಿಂದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳನ್ನು ಭಾರತೀಯ ರೈಲ್ವೆಯಿಂದ ಓಡಿಸಲಾಗುತ್ತಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments