ಗೌತಮ್ ನವ್ಲಖಾ 
ದೇಶ

ಭೀಮಾ ಕೋರೆಗಾಂವ್ ಪ್ರಕರಣ: ಸುಪ್ರೀಂ ಕೋರ್ಟ್ ನಲ್ಲಿ ಗೌತಮ್ ನವ್ಲಖಾ ಜಾಮೀನು ಅರ್ಜಿ ವಜಾ

ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಖಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ನವದೆಹಲಿ: ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಖಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಯುಯು ಲಲಿತ್ ಮತ್ತು ಕೆ ಎಂ ಜೋಸೆಫ್ ಅವರ ನ್ಯಾಯಪೀಠವು ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ನವ್ಲಖಾ ಅವರ ಮೇಲ್ಮನವಿಯನ್ನು ವಜಾಗೊಳಿಸಿದೆ.

ಈ ಪ್ರಕರಣದಲ್ಲಿ ಜಾಮೀನು ಕೋರಿ ನವ್ಲಖಾ ಸಲ್ಲಿಸಿದ್ದ ಮನವಿಯ ಮೇರೆಗೆ ಮಾರ್ಚ್ 26 ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಪ್ರಕರಣ ಸಂಬಂಧ ಮಾರ್ಚ್ 3 ರಂದು ಉನ್ನತ ನ್ಯಾಯಾಲಯವು ಎನ್ಐಎಯಿಂದ ಪ್ರತಿಕ್ರಿಯೆ ಕೋರಿತ್ತು, ನಿಗದಿತ ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲ ಎಂದು ಆರೋಪಿಸಿತ್ತು. ಅವರ ವಿರುದ್ಧ ಎಫ್‌ಐಆರ್ ಅನ್ನು 2020 ರ ಜನವರಿಯಲ್ಲಿ ಮರು ನೋಂದಾಯಿಸಲಾಯಿತು, ಮತ್ತು ನವ್ಲಖಾ ಕಳೆದ ವರ್ಷ ಏಪ್ರಿಲ್ 14 ರಂದು ಎನ್‌ಐಎ ಮುಂದೆ ಶರಣಾದರು. ಅವರು ಏಪ್ರಿಲ್ 25 ರವರೆಗೆ 11 ದಿನಗಳ ಕಾಲ ಎನ್ಐಎ ವಶದಲ್ಲಿದ್ದರು, ಮತ್ತು ಅಂದಿನಿಂದ ಅವರು ನವೀ ಮುಂಬಯಿಯ ತಾಲೋಜ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ನಂತರವೂ ತೈಲ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ: ಇರಾನ್

ಮೋದಿ ರ‍್ಯಾಲಿಗೆ ಮುನ್ನ ಕೋಲ್ಕತ್ತಾದಲ್ಲಿ TMC, BJP ಕಾರ್ಯಕರ್ತರ ನಡುವೆ ಮಾರಾಮಾರಿ; ಪರಸ್ಪರ ಕಲ್ಲು ತೂರಾಟ

4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸರ್ಕಾರ ಸಮ್ಮತಿ: ರಾಜ್ಯದಲ್ಲಿ 14,525 ಉದ್ಯೋಗ ಅವಕಾಶ ಸೃಷ್ಟಿ!

ನಿಮ್ ಕೈಲಾಗಲ್ಲ ಅಂದ್ರೆ ರಾಜಿನಾಮೆ ನೀಡಿ: 'ನಮಾಜ್ ಆದೇಶ' ಪಾಲನೆ ಕುರಿತು ಹೈಕೋರ್ಟ್ ಕೆಂಡಾಮಂಡಲ!

Where's Bibi? ಆರು ಬೆರಳುಗಳಿರುವ ನೆತನ್ಯಾಹು ವಿಡಿಯೋ! ನೆಟ್ಟಿಗರ ಕಳವಳ

SCROLL FOR NEXT