'ಕೊರೋನಾ ವೈರಸ್ ಒಂದು ಜೀವಂತ ಜೀವಿ, ಅದಕ್ಕೆ ಬದುಕುವ ಹಕ್ಕಿದೆ': ಉತ್ತರಾಖಂಡ್ ಮಾಜಿ ಸಿಎಂ ಅಸಹಜ ಹೇಳಿಕೆ
ಕೊರೋನಾ ವೈರಸ್ ಒಂದು ಜೀವಂತ ಜೀವಿಯಾಗಿದ್ದು ಅದಕ್ಕೆ ಬದುಕುವ ಹಕ್ಕು ಇದೆ ಎಂಬ ಅಸಹಜ ಹೇಳಿಕೆಯನ್ನು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೀಡಿದ್ದಾರೆ.
ಡೆಹ್ರಾಡೂನ್: ಕೊರೋನಾ ವೈರಸ್ ಒಂದು ಜೀವಂತ ಜೀವಿಯಾಗಿದ್ದು ಅದಕ್ಕೆ ಬದುಕುವ ಹಕ್ಕು ಇದೆ ಎಂಬ ಅಸಹಜ ಹೇಳಿಕೆಯನ್ನು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೀಡಿದ್ದಾರೆ.
ತಾತ್ವಿಕ ದೃಷ್ಟಿ ಕೋನದಿಂದ ನೋಡಿದಾಗ ಕೊರೋನಾವೈರಸ್ ಸಹ ಜೀವಂತ ಜೀವಿ. ನಮ್ಮಂತೆ ಅದಕ್ಕೂ ಬದುಕುವ ಹಕ್ಕಿದೆ. ಆದರೆ ನಾವು (ಮಾನವರು) ನಮ್ಮನ್ನು ಅತ್ಯಂತ ಬುದ್ಧಿವಂತರು ಎಂದು ಭಾವಿಸಿ ಅದನ್ನು ತೊಡೆದುಹಾಕಲು ಹೊರಟಿದ್ದೇವೆ. ಹೀಗಾಗಿ ಅದು ನಿರಂತರವಾಗಿ ತನ್ನನ್ನು ತಾನೇ ಪರಿವರ್ತಿಸಿಕೊಳ್ಳುತ್ತಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
ಆದರೆ ಮನುಷ್ಯ ಸುರಕ್ಷಿತವಾಗಿರಲು ವೈರಸ್ ನ್ನು ಮೀರಿ ಬದುಕಬೇಕಾಗಿದೆ ಎಂದು ಸಹ ಅವರು ಹೇಳಿದ್ದಾರೆ.
ಇಂದು ಇಡೀ ದೇಶ ಕೊರೋನಾ ಎರಡನೇ ಅಲೆಗೆ ತತ್ತರಿಸಿ ಹೋಗುತ್ತಿರುವಾಗ ಉತ್ತರಾಖಂಡ್ ಮಾಜಿ ಸಿಎಂ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ಜೀವಂತ ವೈರಸ್ ಗೆ ದೆಹಲಿಯ ಸೆಂಟ್ರಲ್ ವಿಸ್ಟಾದಲ್ಲಿ ಆಶ್ರಯ ನೀಡಬೇಕು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.