ದೇಶ

ಸಂಪೂರ್ಣ ಅರಾಜಕತೆ: ಸಚಿವರು, ಶಾಸಕರ ಬಂಧನ ನಂತರದ ಟಿಎಂಸಿ ಪ್ರತಿಭಟನೆಗೆ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಟೀಕೆ

Lingaraj Badiger

ಕೋಲ್ಕತಾ: ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರು ಮತ್ತು ಇತರರನ್ನು ಬಂಧಿಸಿದ ನಂತರ ಪಶ್ಚಿಮ ಬಂಗಾಳದ ಸಿಬಿಐ ಕಚೇರಿಯ ಹೊರಗೆ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಜ್ಯಪಾಲ ಜಗದೀಪ್ ಧಂಕರ್ ಅವರು, ರಾಜ್ಯದಲ್ಲಿ "ಸಂಪೂರ್ಣ ಅರಾಜಕತೆ" ಸೃಷ್ಟಿಯಾಗಿದೆ ಇದೆ ಎಂದು ಸೋಮವಾರ ಆರೋಪಿಸಿದ್ದಾರೆ.

"ಸ್ಫೋಟಕ ಪರಿಸ್ಥಿತಿ"ಯನ್ನು ನಿಯಂತ್ರಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೂಚಿಸಿರುವ ರಾಜ್ಯಪಾಲರು, "ಅಂತಹ ಕಾನೂನುಬಾಹಿರತೆ ಮತ್ತು ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯದ ಪರಿಣಾಮಗಳನ್ನು" ಅರಿತುಕೊಳ್ಳಿ ಎಂದಿದ್ದಾರೆ. ಅಲ್ಲದೆ ಪೊಲೀಸರು ಮೌನವಾಗಿದ್ದು ಪ್ರತಿಭಟನಾಕಾರರ ವಿರುದ್ಧ "ಯಾವುದೇ ಸ್ಪಷ್ಟ ಕ್ರಮ ತೆಗೆದುಕೊಳ್ಳುತ್ತಿಲ್ಲ" ಎಂದು ದೂರಿದ್ದಾರೆ.

ಟ್ವೀಟ್ ಮೂಲಕ ಸಿಎಂ ಮಮತಾ ಬ್ಯಾನರ್ಜಿಗೆ ಸಂದೇಶ ನೀಡಿರುವ ಧಂಕರ್ ಅರು, "ಇದು ಸಂಪೂರ್ಣ ಕಾನೂನುಬಾಹಿರ ಮತ್ತು ಅರಾಜಕತೆ. ಪೊಲೀಸ್ ಮತ್ತು ಆಡಳಿತ ಮೌನವಾಗಿದೆ. ಅಂತಹ ಕಾನೂನುಬಾಹಿರತೆ ಮತ್ತು ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯದ ಪರಿಣಾಮಗಳನ್ನು ನೀವು ಅರಿತುಕೊಳ್ಳುತ್ತೀರಿ ಎಂದು ಭಾವಿಸುವುದಾಗಿ" ಟ್ವೀಟ್ ಮಾಡಿದ್ದಾರೆ.

ನಾರದ ರಹಸ್ಯ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂವರು ಟಿಎಂಸಿ ನಾಯಕರು ಸೇರಿದಂತೆ 5 ಆರೋಪಿಗಳನ್ನು ಬಂಧಿಸಿದ್ದು, ಆರೋಪಪಟ್ಟಿ ಸಹ ಸಲ್ಲಿಸಲಿದೆ. ರಾಜಕಾರಣಿಗಳು ಲಂಚ ತೆಗೆದುಕೊಳ್ಳುವುದು ಕ್ಯಾಮರಾದಲ್ಲಿ ಸೆರೆಯಾದ ಪ್ರಕರಣ ಇದಾಗಿದ್ದು, ಪಶ್ಚಿಮ ಬಂಗಾಳ ಸರ್ಕಾರದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

SCROLL FOR NEXT