ಮುಂಬೈ: ಮಹಾರಾಷ್ಟ್ರಕ್ಕೆ ಟೌಕ್ಟೆ ಚಂಡಮಾರುತ ಅಪ್ಪಳಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ಮೇ.17 ರಂದು ಮುಂಬೈ ನಲ್ಲಿ ಚಂಡಮಾರುತ ಅಪ್ಪಳಿಸುವುದಕ್ಕೂ ಕೆಲವೇ ಗಂಟೆಗಳ ಮುನ್ನ ದಾರಿ ತಪ್ಪಿದ್ದ ಬಾರ್ಜ್ ನಲ್ಲಿ ಇದ್ದವರ 273 ಮಂದಿಯ ಪೈಕಿ 146 ಮಂದಿಯನ್ನು ನೌಕಾಪಡೆಯ ಹಡಗು ರಕ್ಷಿಸಿದೆ.
ಮೇ.18 ರಂದು ಬೆಳಿಗ್ಗೆ ನೌಕಾಪಡೆ ಈ ಬಗ್ಗೆ ಮಾಹಿತಿ ನೀಡಿದ್ದು, P-8I ಲಾಂಗ್ ರೇಂಜ್ ನ್ನು ನಿಯೋಜನೆ ಮಾಡಿರುವುದಾಗಿ ಹೇಳಿದೆ. ಇನ್ನು ನೌಕಾಪಡೆಯ ಮಲ್ಟಿ ಮಿಷನ್ ಮ್ಯಾರಿಟೈಮ್ ಗಸ್ತು ವಿಮಾನ ರಕ್ಷಣಾ ಕಾರ್ಯಾಚರಣೆ, ಶೋಧ ಕಾರ್ಯಾಚರಣೆಯಲ್ಲಿ ತೊಡಗಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಾರ್ಜ್ ಪಿ305 ನಲ್ಲಿದ್ದವರ ರಕ್ಷಣೆಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಮೇ.17 ರ ರಾತ್ರಿಯಿಂದಲೇ ಪ್ರಾರಂಭಿಸಲಾಗಿತ್ತು. ಬೆಳಿಗ್ಗೆ 6 ವರೆಗೂ ಕಾರ್ಯಾಚರಣೆ ನಡೆದಿದ್ದು 146 ಮಂದಿಯನ್ನು ಪ್ರತಿಕೂಲ ವಾತಾವರಣದ ನಡುವೆಯೂ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಐಎನ್ಎಸ್ ತಲ್ವಾರ್ ಮತ್ತೊಂದು ಆಯಿಲ್ ರಿಗ್ ಸಾಗರ್ ಭೂಷಣ್ ಗೆ ಸಹಕಾರಿಯಾಗಿದ್ದು, ಬಾರ್ಜ್ ಎಸ್ಎಸ್-3 ಯಲ್ಲಿರುವ 196 ಮಂದಿಯನ್ನು ರಕ್ಷಣೆ ಮಾಡುವುದಕ್ಕೆ ನೆರವು ನೀಡುತ್ತಿದೆ ಎರಡೂ ಬಾರ್ಜ್ ಗಳು ದಾರಿ ತಪ್ಪಿದ್ದವು.