ಮೆಡೆರ್ನಾ ಲಸಿಕೆ 
ದೇಶ

'ಕೇಂದ್ರದ ಜೊತೆ ಮಾತ್ರ ವ್ಯವಹರಿಸುತ್ತೇವೆ': ಪಂಜಾಬ್ ಗೆ ನೇರವಾಗಿ ಲಸಿಕೆ ಮಾರಾಟ ನಿರಾಕರಿಸಿದ ಮೆಡೆರ್ನಾ

ಕೋವಿಡ್ ಲಸಿಕೆ ತಯಾರಕ ಮೆಡೆರ್ನಾ ತನ್ನ ಲಸಿಕೆಯನ್ನು ನೇರವಾಗಿ ಪಂಜಾಬ್ ಸರ್ಕಾರಕ್ಕೆ ಮಾರಾಟ ಮಾಡುವುದನ್ನು ನಿರಾಕರಿಸಿದೆ.

ಚಂಡೀಗಢ: ಕೋವಿಡ್ ಲಸಿಕೆ ತಯಾರಕ ಮೆಡೆರ್ನಾ ತನ್ನ ಲಸಿಕೆಯನ್ನು ನೇರವಾಗಿ ಪಂಜಾಬ್ ಸರ್ಕಾರಕ್ಕೆ ಮಾರಾಟ ಮಾಡುವುದನ್ನು ನಿರಾಕರಿಸಿದೆ.

ಮೆಡೆರ್ನಾ ನೀತಿಯ ಪ್ರಕಾರ, ಯಾವುದೇ ರಾಜ್ಯ ಸರ್ಕಾರಗಳು ಅಥವಾ ಖಾಸಗಿ ಪಕ್ಷಗಳೊಂದಿಗೆ ವ್ಯವಹರಿಸುವುದಿಲ್ಲ. ಕೇಂದ್ರ ಜೊತೆ ಮಾತ್ರ ವ್ಯವಹರಿಸಲಿದೆ. ಲಸಿಕೆ ಪಂಜಾಬ್ ರಾಜ್ಯ ನೋಡಲ್ ಅಧಿಕಾರಿ ವಿಕಾಸ್ ಗರ್ಗ್ ಮಾತನಾಡಿ, ಸ್ಪುಟ್ನಿಕ್ ವಿ, ಫಿಜರ್, ಮೆಡೆರ್ನಾ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಸೇರಿದಂತೆ ವಿವಿಧ ಕೋವಿಡ್ ಲಸಿಕೆ ತಯಾರಿಕರಿಂದ ನೇರವಾಗಿ ಖರೀದಿಸಲು ಅವರನ್ನು ಸಂಪರ್ಕಿಸಲಾಗಿದೆ. ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ನಿರ್ದೇಶನದಂತೆ ಲಸಿಕೆಯ ಸಾಧ್ಯತೆಗಳನ್ನು ಅನ್ವೇಷಿಸಲು ಸಾಧ್ಯವಿರುವ ಎಲ್ಲ ಮೂಲಗಳಿಂದ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯಲಾಗುವುದು. ಆದರೆ ಮೆಡೆರ್ನಾ ಮಾತ್ರ ಈ ಮೇಲಿನ ಹೇಳಿಕೆ ನೀಡಿದೆ ಎಂದರದು. 

ಲಸಿಕೆಗಳು ಲಭ್ಯವಿಲ್ಲದ ಕಾರಣ ಕಳೆದ ಮೂರು ದಿನಗಳಲ್ಲಿ ಹಂತ 1 ಮತ್ತು 2 ನೇ ವಿಭಾಗಗಳಿಗೆ ಲಸಿಕೆ ನೀಡುವುದನ್ನು ನಿಲ್ಲಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು ಎಂದು ನೆನಪಿಸಿಕೊಳ್ಳಬಹುದು. ಕೇಂದ್ರ ಸರ್ಕಾರದಿಂದ ಇದುವರೆಗೆ 44 ಲಕ್ಷಕ್ಕಿಂತ ಕಡಿಮೆ ಲಸಿಕೆ ಡೋಸ್ ಗಳನ್ನು ಪಡೆದಿರುವ ರಾಜ್ಯದಲ್ಲಿ ತೀವ್ರ ಲಸಿಕೆ ಕೊರತೆ ಎದುರಾಗಿದ್ದು ಅದನ್ನು ನೀಗಿಸಲು ಲಸಿಕೆಗಳನ್ನು ಖರೀದಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದ್ದರು. 

18-44 ವರ್ಷದವರಿಗೆ ಮೂರನೇ ಹಂತಕ್ಕೆ ಶೇಕಡಾವಾರು ಹಂಚಿಕೆಯಂತೆ, ರಾಜ್ಯ ಸರ್ಕಾರವು ನಿನ್ನೆ 66,000 ಸೇರಿದಂತೆ 4.2 ಲಕ್ಷ ಲಸಿಕೆ ಪ್ರಮಾಣವನ್ನು ಮಾತ್ರ ಖರೀದಿಸಲು ಸಾಧ್ಯವಾಗಿದೆ. ಒಟ್ಟು 3.65 ಲಕ್ಷಗಳನ್ನು ಈಗಾಗಲೇ ಬಳಸಲಾಗಿದ್ದು, ಈಗಿನಂತೆ ಬಳಕೆಗೆ ಕೇವಲ 64000 ಮಾತ್ರ ಉಳಿದಿದೆ ಎಂದು ಗಾರ್ಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT