ದೇಶ

ನಾರದಾ ಪ್ರಕರಣ: ವಿಚಾರಣೆ ಮುಂದೂಡುವ ಸಿಬಿಐ ಮನವಿಗೆ ಕೋಲ್ಕತ್ತಾ ಹೈಕೋರ್ಟ್ ನಕಾರ

Srinivas Rao BV

ಕೋಲ್ಕತ್ತ: ನಾರದಾ ಸ್ಟಿಂಗ್ ಟೇಪ್ ಪ್ರಕರಣದ ವಿಚಾರಣೆಯನ್ನು ಮೇ.24 ರಂದು ಕೋಲ್ಕತ್ತ ಹೈಕೋರ್ಟ್ ಕೈಗೆತ್ತಿಕೊಂಡಿತು. ಸಿಬಿಐ ಈ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಮನವಿ ಮಾಡಿತು. ಆದರೆ ಸಿಬಿಐ ಮನವಿಗೆ ಹೈಕೋರ್ಟ್ ನಿರಾಕರಿಸಿದೆ. 

ವರ್ಚ್ಯುಯಲ್ ಸೆಷನ್ ನಲ್ಲಿ ಸಿಬಿಐ ನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ಎದುರು ತನಿಖಾ ಸಂಸ್ಥೆ ವಿಶೇಷ ರಜೆ ಅರ್ಜಿ (ಎಸ್ಎಲ್ ಪಿ) ಸಲ್ಲಿಸುತ್ತು ಆದ್ದರಿಂದ ವಿಚಾರಣೆಯನ್ನು ಮುಂದೂಡುವಂತೆ ಪಂಚಸದಸ್ಯಪೀಠದ ಎದುರು ಮನವಿ ಮಾಡಿದರು. 

ಎಸ್ಎಲ್ ಪಿಯನ್ನು ಸುಪ್ರೀಂ ಕೋರ್ಟ್ ಇನ್ನಷ್ಟೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿರುವುದರಿಂದ ಹೈಕೋರ್ಟ್ ನ ಪಂಚ ಸದಸ್ಯ ಪೀಠ ವಿಚಾರಣೆ ಮುಂದುವರೆಸಲು ತೀರ್ಮಾನಿಸಿತು. ಸ್ಥಳೀಯ ಕೋರ್ಟ್ ನಿಂದ ಹೈಕೋರ್ಟ್ ಗೆ ವರ್ಗಾವಣೆ ಮಾಡುವುದಕ್ಕೆ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

ಇದೇ ವೇಳೆ ನಾರದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಲ್ವರು ಮುಖಂಡರನ್ನು ಗೃಹಬಂಧನದಲ್ಲಿ ಇರಿಸಬೇಕೆಂಬ ಕೋಲ್ಕತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

SCROLL FOR NEXT