ದೇಶ

ಯಾಸ್ ಚಂಡಮಾರುತ: ಆಂಧ್ರದ ಕಡಲ ತೀರದ ಮೂರು ಜಿಲ್ಲೆಗಳಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಎಚ್ಚರಿಕೆ

Srinivas Rao BV

ಅಮರಾವತಿ: ತೀವ್ರವಾದ ಚಂಡಮಾರುತ ಗಾಳಿ ಯಾಸ್ ಹಿನ್ನೆಯಲ್ಲಿ ಆಂಧ್ರದ ಕಡಲ ತೀರದ ಮೂರು ಜಿಲ್ಲೆಗಳಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆಯನ್ನು ನೀಡಿದೆ.

ಶ್ರೀಕಾಕುಳಂ, ವಿಜಿಯನಗರಂ, ವಿಶಾಖಪಟ್ಟಣಂ ಜಿಲ್ಲೆಗಳಿಗೆ ಎಸ್ ಡಿಎಂಎ ಎಚ್ಚರಿಕೆ ನೀಡಿದ್ದು, ಪ್ರತಿ ಗಂಟೆಗೆ ಚಂಡಮಾರುತ 50-60 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು 70 ಕಿ.ಮೀ ವೇಗಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಮೀನುಗಾರರಿಗೂ ಎಚ್ಚರಿಕೆ ನೀಡಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ. "ಮೇ.27 ರ ಬೆಳಿಗ್ಗೆ ವರೆಗೂ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಸಲಹೆ ನೀಡಲಾಗಿದೆ" ಎಂದು ತಿಳಿಸಿದೆ.

ಕಡಲ ತೀರದ ಗ್ರಾಮಗಳಲ್ಲಿ ಶ್ರೀಕಾಕುಳಂ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ, ಒಡಿಶಾ ಗಡಿಯಲ್ಲಿರುವ ಶ್ರೀಕಾಕುಳಂ ಜಿಲ್ಲೆಯ ಪ್ರದೇಶಗಳಲ್ಲಿ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT