ಸಾಂದರ್ಭಿಕ ಚಿತ್ರ 
ದೇಶ

ಡ್ರೈ ಫ್ರೂಟ್ಸ್ ಟ್ರೆಡರ್ಸ್ ಮೇಲೆ ಐಟಿ ದಾಳಿ, 200 ಕೋಟಿಗೂ ಅಧಿಕ ಲೆಕ್ಕವಿಲ್ಲದ ಆದಾಯ ಪತ್ತೆ!

 ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಡ್ರೈ ಫ್ರೂಟ್ಸ್  ವ್ಯಾಪಾರದಲ್ಲಿ ತೊಡಗಿರುವ ಜನರ ಮೇಲೆ ದಾಳಿ ನಡೆಸಿದ ನಂತರ 200 ಕೋಟಿ ರೂ.ಗೂ ಅಧಿಕ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ  ಶುಕ್ರವಾರ ತಿಳಿಸಿದೆ.

ನವೆದಹಲಿ: ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಡ್ರೈ ಫ್ರೂಟ್ಸ್  ವ್ಯಾಪಾರದಲ್ಲಿ ತೊಡಗಿರುವ ಜನರ ಮೇಲೆ ದಾಳಿ ನಡೆಸಿದ ನಂತರ 200 ಕೋಟಿ ರೂ.ಗೂ ಅಧಿಕ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ  ಶುಕ್ರವಾರ ತಿಳಿಸಿದೆ.

ಅಕ್ಟೋಬರ್ 28 ರಂದು ದಾಳಿ ನಡೆಸಲಾಗಿದ್ದು, ಈ ಗುಂಪು  ಹಲವಾರು ವರ್ಷಗಳಿಂದ ಒಣ ಹಣ್ಣುಗಳ ಖರೀದಿಯನ್ನು ವಿಪರೀತವಾಗಿ ಹೆಚ್ಚಿಸುತಿತ್ತು ಎಂದು  ಸಿಬಿಡಿಟಿ ಹೇಳಿದೆ. ವಶಕ್ಕೆ ಪಡೆಯಲಾದ ದಾಖಲಾತಿಯಲ್ಲಿ ಮಾರಾಟ ಮತ್ತು ಖರೀದಿ ನಡುವೆ ದೊಡ್ಡ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ದಾಳಿ ವೇಳೆ ರೂ. 40 ಕೋಟಿಯಷ್ಟು ಹೆಚ್ಚುವರಿ ದಾಸ್ತಾನು ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತು ಮತ್ತು ಸಂಗ್ರಹಿಸಿದ ಪುರಾವೆಗಳ ವಿಶ್ಲೇಷಣೆ ಪ್ರಕಾರ ಒಂದು ಗುಂಪು ಬೇನಾಮಿಯಾಗಿ ವ್ಯವಹಾರ ನಡೆಸುತಿತ್ತು ಎಂದು ಅದು ಹೇಳಿದೆ. 

ಶೋಧ ಕಾರ್ಯದ ವೇಳೆ ಲೆಕ್ಕಕ್ಕೆ ಸಿಗದ 63 ಲಕ್ಷ ರೂ. ನಗದು ಮತ್ತು 2 ಕೋಟಿ ರೂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ ಮತ್ತು 200 ಕೋಟಿ ರೂ.ಗಿಂತ ಹೆಚ್ಚಿನ ಲೆಕ್ಕಕ್ಕೆ ಬಾರದ ಆದಾಯವನ್ನು ಪತ್ತೆಹಚ್ಚಿದೆ" ಎಂದು ಅದು ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?