ದೇಶ

ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ: ವರದಿ

Srinivas Rao BV

ನವದೆಹಲಿ: ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 

ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಿದೆ.

ಕೋವಿಡ್ ಸಾಂಕ್ರಾಮಿಕದಿಂದ ಬಡ ಮಕ್ಕಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಮತ್ತು ಅಪೌಷ್ಟಿಕತೆ ಹೆಚ್ಚಲು ಕಾರಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಹೇಳಿದೆ. 17,76,902 (17.76 ಲಕ್ಷ/1.7 ಮಿಲಿಯನ್) ಮಕ್ಕಳು ಹೆಚ್ಚು ಅಪೌಷ್ಟಿಕತೆಯಿಂದ (SAM-severely acute malnourished children) ಬಳಲುತ್ತಿವೆ. 15, 46,420 (15.46 ಲಕ್ಷ/1.5 ಮಿಲಿಯನ್) ಮಕ್ಕಳು ಮಧ್ಯಮ ಅಪೌಷ್ಟಿಕತೆಯಿಂದ (MAM-moderately acute malnourished ) ಬಳಲುತ್ತಿವೆ. 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 33,23,322 (33.23 ಲಕ್ಷ/3.3 ಮಿಲಿಯನ್) ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ ಎಂದು ಆರ್​ಟಿಐ ಪ್ರಶ್ನೆಗೆ  ಸಚಿವಾಲಯ ಉತ್ತರ ನೀಡಿದೆ. ಕಳೆದ ವರ್ಷ ಅಭಿವೃದ್ಧಿಪಡಿಸಲಾದ ಪೋಶನ್ ಟ್ರ್ಯಾಕರ್ ಅಪ್ಲಿಕೇಶನ್ ನಲ್ಲಿ ಸಂಖ್ಯೆಗಳನ್ನು ನೋಂದಾಯಿಸಲಾಗಿದೆ.

ನವೆಂಬರ್ 2020 ಮತ್ತು ಅಕ್ಟೋಬರ್ 14, 2021 ರ ನಡುವೆ SAM ಮಕ್ಕಳ ಸಂಖ್ಯೆಯಲ್ಲಿ 91 ಪ್ರತಿಶತದಷ್ಟು ಏರಿಕೆ ಕಂಡುಬಂದಿದೆ. ಅಂದರೆ  9,27,606 (9.27 ಲಕ್ಷ) ದಿಂದ ಈಗ 17.76 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಈ ಎರಡು ಅಂಕಿಅಂಶಗಳ ಡೇಟಾ ಸಂಗ್ರಹಣೆಯ ವಿಧಾನ ವಿಭಿನ್ನವಾಗಿದೆ. 

ಕಳೆದ ವರ್ಷ ಗುರುತಿಸಲಾದ SAM ಮಕ್ಕಳ ಸಂಖ್ಯೆಯನ್ನು ಆರು ತಿಂಗಳಿಂದ ಹಿಡಿದು ಆರು ವರ್ಷಗಳವರೆಗಿನ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿತ್ತು. ಇತ್ತೀಚಿನ ಅಂಕಿಅಂಶಗಳು ಪೋಶನ್ ಟ್ರ್ಯಾಕರ್ ಮೂಲಕ, ಅಲ್ಲಿ ಅಂಗನವಾಡಿಗಳಿಂದ ನೇರವಾಗಿ ಸಂಖ್ಯೆಗಳನ್ನು ನಮೂದಿಸಲಾಗಿದೆ ಮತ್ತು ಮಕ್ಕಳ ವಯಸ್ಸಿನ ಗುಂಪನ್ನು ನಿರ್ದಿಷ್ಟಪಡಿಸಲಾಗಿಲ್ಲ.

SCROLL FOR NEXT