ದೇಶ

ತನ್ನ ಸೇಲ್ಸ್ ಮ್ಯಾನ್ ನನ್ನು ಉಗ್ರರು ಹತ್ಯೆ ಮಾಡಿದ ಬಳಿಕವೂ ಕಾಶ್ಮೀರ ತೊರೆಯುವುದಿಲ್ಲ ಎಂದ ಕಾಶ್ಮೀರಿ ಪಂಡಿತ್ ವ್ಯಾಪಾರಿ

Lingaraj Badiger

ಶ್ರೀನಗರ: ತನ್ನನ್ನು ಗುರಿಯಾಗಿಸಿಕೊಂಡು ನಡೆದ ಉಗ್ರರ ದಾಳಿಯಲ್ಲಿ ಸೇಲ್ಸ್‌ಮ್ಯಾನ್ ಸಾವನ್ನಪ್ಪಿದ ಬಳಿಕವೂ ತಾವು ಕಾಶ್ಮೀರವನ್ನು ಬಿಟ್ಟು ಹೋಗುವುದಿಲ್ಲ. ಕುಟುಂಬದ ವಿರೋಧದ ಹೊರತಾಗಿಯೂ ತಾನು ಇಲ್ಲಿಯೇ ಉಳಿಯುವುದಾಗಿ ಕಾಶ್ಮೀರಿ ಪಂಡಿತ್ ಉದ್ಯಮಿ ಸಂದೀಪ್ ಮಾವಾ ಅವರು ಹೇಳಿದ್ದಾರೆ.

ಗುಪ್ತಚರ ಮಾಹಿತಿಯಿಂದಾಗಿ ನಾನು ನನ್ನ ಅಂಗಡಿಯಿಂದ ಬೇಗನೆ ಹೊರಟೆ. ಹೀಗಾಗಿ ನಾನು ಉಗ್ರರು ದಾಳಿಯಿಂದ ಪಾರಾಗಿದ್ದೇನೆ ಎಂದು ಮಾವಾ ಹೇಳಿಕೊಂಡಿದ್ದಾರೆ. ಆದರೆ ಅವರ ಸೇಲ್ಸ್ ಮ್ಯಾನ್ ಮೊಹಮ್ಮದ್ ಇಬ್ರಾಹಿಂ ಖಾನ್ ಅವರು ಸೋಮವಾರ ನಗರದ ಬೋಹ್ರಿ ಕಡಲ್ ಪ್ರದೇಶದಲ್ಲಿನ ಅಂಗಡಿ ಬಳಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಸೋಮವಾರದ ದಾಳಿ ಮತ್ತು ಅಲ್ಪಸಂಖ್ಯಾತರ ವಿರುದ್ಧದ ಇಂತಹ ಸರಣಿ ಉಗ್ರ ದಾಳಿಗಳ ಹಿನ್ನೆಲೆಯಲ್ಲಿ ನೀವು ಕಾಶ್ಮೀರವನ್ನು ತೊರೆಯಲು ಯೋಚಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾವಾ ಅವರು, "ಇಲ್ಲ, ನಾನು ಕಾಶ್ಮೀರವನ್ನು ತೊರೆಯುತ್ತಿಲ್ಲ (ಕಣಿವೆಯನ್ನು ತೊರೆಯುವ) ಮತ್ತು ತೊರೆಯುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.

ಸೋಮವಾರದ ದಾಳಿಯು ತಪ್ಪಾದ ಗುರುತು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲಿನ ಸರಣಿ ದಾಳಿಯ ಒಂದು ಭಾಗವಾಗಿದೆ ಎಂದು ಮಾವಾ ಅವರು ಹೇಳಿದ್ದಾರೆ.

2018 ರಲ್ಲಿ ಕಾಶ್ಮೀರಕ್ಕೆ ಮರಳಿದ ಮಾವಾ ಅವರು ಮತ್ತೆ ಕಣಿವೆ ರಾಜ್ಯವನ್ನು ತೊರೆಯುವುದಿಲ್ಲ. ಇದಕ್ಕೆ ನನ್ನ ಕುಟುಂಬದ ವಿರೋಧದ ಹೊರತಾಗಿಯೂ ಕಾಶ್ಮೀರದಲ್ಲಿ ಉಳಿಯಲು ನಿರ್ಧರಿಸಿರುವುದಾಗಿ ಮಾವಾ ತಿಳಿಸಿದ್ದಾರೆ.

SCROLL FOR NEXT