ದೇಶ

ಗ್ಯಾಂಗ್ ರೇಪ್ ಪ್ರಕರಣ: ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ, ಇನ್ನೂ ಇಬ್ಬರಿಗೆ ಜೀವಾವಧಿ ಶಿಕ್ಷೆ

Srinivas Rao BV

ಲಖನೌ: ಉತ್ತರ ಪ್ರದೇಶದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ರಾಜ್ಯದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಹಾಗೂ ಇನ್ನೂ ಇಬ್ಬರಿಗೆ ಲಖನೌ ನ ವಿಶೇಷ ಎಂಎಲ್ಎ/ಎಂಪಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಗಾಯತ್ರಿ ಪ್ರಜಾಪತಿ ಹಾಗೂ ಇನ್ನೂ ಇಬ್ಬರ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬುಧವಾರದಂದು ಆರೋಪಿಗಳನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ನ.12ಕ್ಕೆ ಕಾಯ್ದಿರಿಸಿತ್ತು. ಇಂದು ಆ ತೀರ್ಪನ್ನು ನ್ಯಾಯಾಲಯ ಪ್ರಕಟಿಸಿದೆ.

ಮೂವರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯದ ಎಂಪಿ/ಎಂಎಲ್ಎ ಕೋರ್ಟ್ ನ ನ್ಯಾಯಾಧೀಶರಾದ ಪವನ್ ಕುಮಾರ್ ರೈ ತಲಾ 2 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. 

ಆದರೆ ಪ್ರಕರಣದ ಇನ್ನೂ ನಾಲ್ವರು ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದ್ದು, ಪಿಸಿಎಸ್ ಅಧಿಕಾರಿಯ ಪುತ್ರ ವಿಕಾಸ್ ವರ್ಮ, ರೂಪೇಶ್, ಅಮರಿಂದ್ರ ಸಿಂಗ್ ಪಿಂಟು, ಮಾಜಿ ಸಚಿವರ ಗನ್ನರ್ ಚಂದ್ರಪಾಲ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿದೆ.

ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಬಳಿಕ, ಗಾಯತ್ರಿ ಪ್ರಜಾಪತಿ ಅವರ ವಕೀಲರು ಶಿಕ್ಷೆಯನ್ನು ರಾಜಕೀಯ ದ್ವೇಷ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ಸಚಿವರು ಕೋರ್ಟ್ ತೀರ್ಪನ್ನು ಅಲ್ಲಾಹಾಬಾದ್ ಹೈಕೋರ್ಟ್ ನಲ್ಲಿ ಪ್ರಶ್ನಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಖಿಲೇಶ್ ಯಾದವ್ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಜಾಪತಿ ಗ್ಯಾಂಗ್ ರೇಪ್ ಆರೋಪದಡಿ 2017 ರಿಂದಲೂ ಜೈಲಿನಲ್ಲಿದ್ದಾರೆ.

SCROLL FOR NEXT