ದೇಶ

ಸೆಪ್ಟೆಂಬರ್ 27 ರವರೆಗೆ ಹಿರಿಯರಿಗೆ 17. 26 ಕೋಟಿ ಡೋಸ್ ಕೋವಿಡ್ -19 ಲಸಿಕೆ ನೀಡಿಕೆ-  ಕೇಂದ್ರ ಸರ್ಕಾರ

Nagaraja AB

ನವದೆಹಲಿ: ದೇಶದಲ್ಲಿ ಸೆಪ್ಟೆಂಬರ್ 27ರವರೆಗೆ ವಯೋವೃದ್ಧರು ಹಾಗೂ ವಿಶೇಷ ಚೇತನರಿಗೆ  ಹತ್ತಿರದ ಕೋವಿಡ್ ಲಸಿಕಾ ಕೇಂದ್ರಗಳಿಂದ ಸುಮಾರು 17.26 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.

ವೃದ್ದರು ಹಾಗೂ ವಿಶೇಷ ಚೇತನರಿಗೆ ಕೋವಿಡ್-19 ಲಸಿಕೆಗೆ  ಶಿಫಾರಸ್ಸಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೇ 2021ರಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿತ್ತು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಮೂಲಕ ಕೇಂದ್ರ ಸರ್ಕಾರ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಎಎಸ್ ಬೊಪಣ್ಣ ಅವರಿದ್ದ ನ್ಯಾಯಪೀಠಕ್ಕೆ ಕೇಂದ್ರ ಸರ್ಕಾರ ತಿಳಿಸಿತು.

 ವಿಕಲಾಂಗತೆ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಮನೆ- ಮನೆಗೆ ತೆರಳಿ ಕೋವಿಡ್ ಲಸಿಕೆ ಒದಗಿಸುವಂತೆ ಕೋರಿ ಎನ್ ಜಿಒವೊಂದು ಸಲ್ಲಿಸಿದ ಅರ್ಜಿಗೆ ಕೇಂದ್ರ  ಸರ್ಕಾರ ಪ್ರತಿಕ್ರಿಯಿಸಿದ್ದು, ವೃದ್ದರು ಹಾಗೂ ವಿಶೇಷ ಚೇತನರಿಗೆ ಲಸಿಕೆಯ ವಿಶೇಷ ಅಗತ್ಯತೆಗೆ ಹತ್ತಿರದ ಕೋವಿಡ್ ಲಸಿಕಾ ಕೇಂದ್ರಗಳ ಕಾರ್ಯತಂತ್ರವನ್ನು ತಜ್ಞರ ಸಮಿತಿ ಶಿಫಾರಸು ಮಾಡಿತ್ತು ಎಂದು ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. 

ಸೆಪ್ಟೆಂಬರ್ 27, 2021ರವರೆಗೆ ಸುಮಾರು 17.26 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಹತ್ತಿರದ ಕೋವಿಡ್ ಲಸಿಕಾ ಕೇಂದ್ರಗಳ ಪ್ರಯೋಜನವನ್ನು ವಿಶೇಷ ಚೇತನರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

SCROLL FOR NEXT