ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ 
ದೇಶ

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಆದಾಯ ಎಲ್ಲಿ ಖರ್ಚಾಗಿದೆ?: ಕೇಂದ್ರ ಸರ್ಕಾರಕ್ಕೆ 'ಚಿದಂಬರ' ಪ್ರಶ್ನೆ

ಇಂಧನ ತೆರಿಗೆಯಿಂದ ಗಳಿಸಿದ ಹಣವನ್ನು ಕೇಂದ್ರ ಸರಕಾರ ಎಲ್ಲಿಗೆ ಖರ್ಚು ಮಾಡಿದೆ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಪ್ರಶ್ನಿಸಿದ್ದು, ಅದರಲ್ಲಿ ಹೆಚ್ಚಿನ ಭಾಗವನ್ನು ಕಾರ್ಪೊರೇಟ್‌ಗಳಿಗೆ ರಿಯಾಯಿತಿ ನೀಡಲು ಬಳಸಲಾಗಿದೆ...

ನವದೆಹಲಿ: ಇಂಧನ ತೆರಿಗೆಯಿಂದ ಗಳಿಸಿದ ಹಣವನ್ನು ಕೇಂದ್ರ ಸರಕಾರ ಎಲ್ಲಿಗೆ ಖರ್ಚು ಮಾಡಿದೆ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಪ್ರಶ್ನಿಸಿದ್ದು, ಅದರಲ್ಲಿ ಹೆಚ್ಚಿನ ಭಾಗವನ್ನು ಕಾರ್ಪೊರೇಟ್‌ಗಳಿಗೆ ರಿಯಾಯಿತಿ ನೀಡಲು ಬಳಸಲಾಗಿದೆ ಎಂದು ಆರೋಪಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಚಿದಂಬರಂ, ಕೇರಳ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಹಂಚಿಕೊಂಡ ಮಾಹಿತಿಯನ್ನು ಉಲ್ಲೇಖಿಸಿ, "ಕೇರಳ ಹಣಕಾಸು ಸಚಿವರು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹಿಸಲಾದ ತೆರಿಗೆಗಳ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇದಕ್ಕೆ ಕೇಂದ್ರ ಹಣಕಾಸು ಸಚಿವರು ಉತ್ತರ ನೀಡಬೇಕು" ಎಂದು ಹೇಳಿದ್ದಾರೆ.

"2020-21ರಲ್ಲಿ ಅಬಕಾರಿ ಸುಂಕ, ಸೆಸ್ ಮತ್ತು ಹೆಚ್ಚುವರಿ ಅಬಕಾರಿ ಸುಂಕದ ರೂಪದಲ್ಲಿ 3,72,000 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಈ ಬೃಹತ್ ಮೊತ್ತದಲ್ಲಿ ಕೇವಲ 18 ಸಾವಿರ ರೂ.ಗಳನ್ನು ಮೂಲ ಅಬಕಾರಿ ಸುಂಕವಾಗಿ ಸಂಗ್ರಹಿಸಿ, ಅದರಲ್ಲಿ ಶೇ.41 ರಷ್ಟನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ. ಉಳಿದ 3,54,000 ಕೋಟಿ ಕೇಂದ್ರಕ್ಕೆ ಹೋಯಿತು” ಎಂದು ಹೇಳಿದ್ದಾರೆ.

‘‘ಇದು ಮೋದಿ ಸರಕಾರ ನಡೆಸುತ್ತಿರುವ ‘ಸಹಕಾರಿ ಫೆಡರಲಿಸಂ’ ಮಾದರಿ. ಇದರ ಹೊರತಾಗಿ ₹ 3,54,000 ಕೋಟಿಯಷ್ಟು ಬೃಹತ್ ಮೊತ್ತವನ್ನು ಎಲ್ಲಿ, ಹೇಗೆ ಯಾರಿಗೆ ಖರ್ಚು ಮಾಡಲಾಗಿದೆ? 1,45,000 ಕೋಟಿಯಷ್ಟು ಹಣವನ್ನು ಕಾರ್ಪೊರೇಟ್‌ಗಳಿಗೆ ಬಳಸಲಾಗಿದೆ. ಕಾರ್ಪೊರೇಟ್ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಕಾರ್ಪೊರೇಟ್ ಬೋನಸ್ ಪಾವತಿಸುವ ಮೂಲಕ ಅಂತರವನ್ನು ಸೃಷ್ಟಿಸಲಾಗಿದೆ" ಎಂದಿದ್ದಾರೆ.

ನೋಟು ಅಮಾನ್ಯೀಕರಣವನ್ನು ಉಲ್ಲೇಖಿಸಿ, "ಕುಖ್ಯಾತ ನೋಟು ಅಮಾನ್ಯೀಕರಣದ ಐದು ವರ್ಷಗಳ ನಂತರ, ಮೋದಿ ಸರ್ಕಾರದ ದೊಡ್ಡ ಘೋಷಣೆಗಳ ಸ್ಥಿತಿ ಏನು? ನಾವು ನಗದು ರಹಿತ ಆರ್ಥಿಕತೆಯಾಗಬೇಕು ಎಂದು ಮೋದಿ ಈ ಹಿಂದೆ ಹೇಳಿದ್ದರು! ಕೆಲವೇ ದಿನಗಳಲ್ಲಿ ಇದೊಂದು ಅಸಂಬದ್ಧ ಗುರಿ ಎಂಬುದನ್ನು ಅವರು ಅರಿತುಕೊಂಡರು” ಎಂದಿದ್ದಾರೆ.

ಮಧ್ಯಮ ವರ್ಗ ಮತ್ತು ಬಡವರು ಖರ್ಚು ಮಾಡಲು ಹಣವಿಲ್ಲದ ಕಾರಣ ಭಾರತವು ಕಡಿಮೆ ನಗದು ಆರ್ಥಿಕತೆಯಾಗಿದೆ. ಹೆಚ್ಚಿನ ನಿರುದ್ಯೋಗ ಮತ್ತು ಹಣದುಬ್ಬರಕ್ಕೆ ಧನ್ಯವಾದಗಳು, ಬಡ ಮತ್ತು ಕೆಳ ಮಧ್ಯಮ ವರ್ಗದವರು ಕಡಿಮೆ ಹಣವನ್ನು ಗಳಿಸುತ್ತಾರೆ ಮತ್ತು ಕಡಿಮೆ ಹಣವನ್ನು ಖರ್ಚು ಮಾಡುತ್ತಾರೆ. ನಾವು ನಿಜವಾಗಿಯೂ ಕಡಿಮೆ ನಗದು ಆರ್ಥಿಕತೆಯಾಗಿದ್ದೇವೆ! ಚೆನ್ನಾಗಿದೆ!" ಎಂದು ಚಿದಂಬಂರಂ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT