ದೇಶ

ಗೋವು, ಅವುಗಳ ಸಗಣಿ, ಮೂತ್ರ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ: ಮಧ್ಯ ಪ್ರದೇಶ ಸಿಎಂ

Lingaraj Badiger

ಭೋಪಾಲ್: ಗೋವುಗಳು, ಅವುಗಳ ಸಗಣಿ ಮತ್ತು ಮೂತ್ರ ರಾಜ್ಯ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರ ಹೇಳಿದ್ದಾರೆ.

ಗೋವುಗಳು, ಅವುಗಳ ಸಗಣಿ ಮತ್ತು ಮೂತ್ರದ ಸಹಾಯದಿಂದ ರಾಜ್ಯ ಹಾಗೂ ದೇಶದ ಆರ್ಥಿಕತೆಯನ್ನು ಸದೃಢಗೊಳಿಸಬಹುದು ಮತ್ತು ಮುಂದೊಂದು ದಿನ ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ಚೌಹಾಣ್ ತಿಳಿಸಿದ್ದಾರೆ.

ಭೋಪಾಲ್‌ನಲ್ಲಿ ಭಾರತೀಯ ಪಶುವೈದ್ಯಕೀಯ ಸಂಘ ಆಯೋಜಿಸಿದ್ದ ಮಹಿಳಾ ಪಶು ವೈದ್ಯರ ಸಮಾವೇಶ ಉದ್ದೇಶಿಸಿ ಮಾತನಾಡಿದ ಚೌಹಾಣ್, ಈಗ ಗೋವಿನ ಸಗಣಿ ಮತ್ತು ಮೂತ್ರದಿಂದ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಮಧ್ಯಪ್ರದೇಶದ ಕೆಲವು ಸ್ಮಶಾನಗಳಲ್ಲಿ ಜನರು ಮರದ ಬದಲಿಗೆ ಗೋವಿನ ಸಗಣಿ ತುಂಡುಗಳನ್ನು ಬಳಸುತ್ತಿದ್ದಾರೆ" ಎಂದು ಹೇಳಿದರು.

ಸರ್ಕಾರ ಗೋವುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ಸ್ಥಾಪಿಸಿದೆ. ಆದರೆ ಅವುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಮಾಜದ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಮಧ್ಯ ಪ್ರದೇಶ ಸಿಎಂ ಹೇಳಿದ್ದಾರೆ.

SCROLL FOR NEXT